ಕ್ಯಾಮರಮೆನ್ ಮೇಲೆ ಹಲ್ಲೆ ಖಂಡಿಸಿ ಹಾಗೂ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ.

0
198

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿಕ್ಕಮಗಳೂರು ಪ್ರಜಾ ಟಿವಿ ಕ್ಯಾಮರಮೆನ್ ಮೇಲೆ ಹಲ್ಲೆ ಮಾಡಿರುವ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪರವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ಪತ್ರಕರ್ತರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಗಾಯಿತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಆಸ್ಪತ್ರೆ ಅವ್ಯವಸ್ಥೆ ಹಾಗೂ ವೃದ್ದನೋರ್ವನ ಆರೋಗ್ಯದ ಬಗ್ಗೆ ಸುದ್ದಿ ಮಾಡಲು ತೆರಳಿದ್ದಾಗ ಚಿಕ್ಕಮಗಳೂರಿನ ಸರ್ಜನ್ ದೊಡ್ಡಮಲ್ಲಪ್ಪ ಎಂಬುವವರು ಪ್ರಜಾ ವಾಹಿನಿಯ ಛಾಯಗ್ರಾಹಕ ಭರತ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಜರುಗಿತು.

LEAVE A REPLY

Please enter your comment!
Please enter your name here