ಕ್ರೀಡೆಗೆ ಪ್ರೋತ್ಸಾಹ, ಸ್ವಾಗತಾರ್ಹ…

0
76

ಬೆಂಗಳೂರು/ಕೃಷ್ಣರಾಜಪುರ:- ಶಾಲಾಶಿಕ್ಷಕರು ಮತ್ತು ಪೋಷಕರು ಶಿಕ್ಷಣದೊಂದಿಗೆ  ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅಂತಾರಾಷ್ಟೀಯ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಇಲ್ಲಿನ ಎಸ್.ಇ.ಎ.ಕಾಲೇಜಿನಲ್ಲಿ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ ಅಸೋಷಿಯನ್ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಓಪನ್ ರಾಷ್ಟ್ರೀಯ ಮಟ್ಟದ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ ಚಾಂಪಿಯನ್ ನಾಲ್ಕನೇ ಆವೃತ್ತಿಯ ಕ್ರೀಡಾಪಟುಗಳ ಆಯ್ಕೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಹಿಂದೆ ಭಾರತ ದೇಶ ಅಂತಾರಾಷ್ಟ್ರೀಯ ಕ್ರೀಡೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿಂದುಳಿದ್ದು ಸರ್ಕಾರ, ಶಾಲೆ, ಹಾಗೂ ಪೋಷಕರು ಕ್ರೀಡೆಗಳಿಗೆ ಆದ್ಯತೆ ನೀಡುತ್ತೀರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಕೀರ್ತಿ ಪತಾಕಿಯನ್ನು ಹಾರಿಸಲಾಗುತ್ತಿದೆ ಎಂದು ಹೇಳಿದರು.

ಕ್ರೀಡೆ ಮನುಷ್ಯನ ಒಂದು ಅವಿಭಾಜ್ಯ ಅಂಗವಾಗಿದ್ದು, ಯುವ ಪೀಳಿಗೆ ಕ್ರೀಡೆಗಳಲ್ಲಿ ಪಾಲ್ಗೊಳುವುದರಿಂದ ಮಾನಸಿಕ ಹಾಗೂ ಶರೀರಿಕವಾಗಿ ಸಧೃಡಗೊಳ್ಳಲು ಸಹಕಾರಿಯಾಗಿದೆ. ಶಿಕ್ಷಣ ಸಂಸ್ಥೆಗಳು ವಿದ್ಯೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತವೋ ಅಷ್ಟೇ ಮಹತ್ವನ್ನು ಕ್ರೀಡೆಗೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸ್ಪರ್ಧೆಯಲ್ಲಿ ವಿಜೇತರಾದವರು ಚೀನಾದ ಬ್ರಿಜಿಂಗ್ನಲ್ಲಿ ನಡೆಯುವ ಏಷ್ಯನ ಚಾಂಪಿಯನ್ಶೀಪ್ಗೆ ಆಯ್ಕೆಯಾಗಲಿದ್ದಾರೆ. ಏಷ್ಯನ್ ಚಾಂಪಿಯನ್ಶೀಪ್ನಲ್ಲಿ ಪದಕ ಪಡೆಯಬೇಕೆಂಬ ಉದ್ದೇಶದಿಂದ ಸತತವಾಗಿ ನಾಲ್ಕು ವರ್ಷದಿಂದ ಈ ಸ್ಪರ್ಧೆ ನಡೆಸುಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ರಾಜ್ಯದಿಂದ 65 ಕ್ರೀಡಾಪಟುಗಳು, ಮಣೀಪುರ, ಸಿಕ್ಕಿಂ, ಜಮ್ಮು ಕಾಶ್ಮೀರ, ಅಸ್ಸಾಂ, ಸೇರಿದಂತೆ ಸುಮಾರು 26 ರಾಜ್ಯಗಳಿಂದ 250 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಇನ್ನು ಮೂರು ದಿನಗಳ ಕಾಲ ಸ್ಪರ್ಧೆ ನಡೆಯಲಿದೆ ಎಂದು ರಾಷ್ಟ್ರೀಯಮಟ್ಟದ ಮಿಕ್ಸ್ ಮಾರ್ಷಲ್ ಆಟ್ರ್ಸ ಅಸೋಷಿಯನ್ ರಾಷ್ಟ್ರೀಯ ಕಾರ್ಯನಿರತ ಪ್ರಧಾನ ಕಾರ್ಯದರ್ಶಿ ಪ್ರಸಾದ್ ತಿಳಿಸಿದರು.

ಈ ಸಂದರ್ಬದಲ್ಲಿ ಮಹದೇವಪುರ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ರಾಜೇಶ್, ಮಧು, ಮಿಕ್ಸ್ ಮಾರ್ಷಲ್ ಆಟ್ರ್ಸ ಅಸೋಷಿಯನ್ನ ಉಪಾಧ್ಯಕ್ಷ ಕೆವಿನ್ ಆಲ್ಫ್ರೇಡ್ ಡೇವಿಡ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here