ಕ್ವಿಟ್ ಇಂಡಿಯಾ ಚಳುವಳಿಯ ೭೫ ನೇ ವರ್ಷಾಚರಣೆ,ತಿರಂಗಾ ಯಾತ್ರೆ.

0
203

ಬೆಂಗಳೂರು/ಕೆಆರ್ ಪುರ:– ಕ್ವಿಟ್ ಇಂಡಿಯಾ ಚಳುವಳಿ ೭೫ ನೇ ವರ್ಷಾಚರಣೆ ಅಂಗವಾಗಿ ಭವಿಷ್ಯ ನಿಧಿ ಇಲಾಖೆ ವತಿಯಿಂದ ಬೆಂಗಳೂರಿನ ಕೆ.ಆರ್.ಪುರದಲ್ಲಿ ತಿರಂಗಾ ಯಾತ್ರೆ ಮೆರವಣಿಗೆ ಹಮ್ಮಿಕೊಂಡಿದ್ದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಯಾತ್ರೆಗೆ ಚಾಲನೆ ನೀಡಿದರು.

ಹೀಗೆ ಸಾವಿರಾರು ಶಾಲಾ ವಿದ್ಯಾರ್ಥಿಗಳು ಕೆ.ಆರ್.ಪುರದ ಐಟಿಐ ಕ್ರಿಕೇಟ್ ಮೈದಾನದಿಂದ ಅಂಚೆ ಕಚೇರಿವರೆಗೆ ತಿರಂಗಾ ಯಾತ್ರೆ ನಡೆಸಿದ್ದು, ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಸಾಂಖ್ಯಿಕ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಬಿ.ಎ. ಬಸವರಾಜ್ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಐಟಿಐ ಕೇಂದ್ರ ಕಚೇರಿ ಅವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು ಚಿಕ್ಕಮಗಳೂರು ನಲ್ಲಿ ನಿರ್ಮಾಣವಾಗುತ್ತಿರುವ ಭವಿಷ್ಯ ನಿಧಿ ಕಚೇರಿಯ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರುಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಂಡಾರು ದತ್ತಾತ್ರೇಯ ನಮ್ಮ ಇಲಾಖೆಯು ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಎಲ್ಲಾ ಸದಸ್ಯರು ನಿವೃತ್ತಿ ಹೊಂದುವಾಗ ಸ್ವಂತ ಮನೆ ಹೊಂದಿರಬೇಕು ಎಂಬ ಸಂಕಲ್ಪ ಹೊಂದಿದೆ.
ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಕಚೇರಿಯನ್ನು ಕಾಗದ ರಹಿತ ಮಾಡುವ ಮೂಲಕ ಪಾರದರ್ಶಕತೆ, ತ್ವರಿತ ಸೇವೆಗೆ ಆದ್ಯತೆ ನೀಡಲಾಗುವುದು.
ಕರ್ನಾಟಕದಲ್ಲಿ ಸಂಘಟನೆಯು ೧೩ ಲಕ್ಷ ಹೊಸ ಸದಸ್ಯರನ್ನು ನೋಂದಾಯಿಸಿದೆ. ಇಡೀ ದೇಶದಲ್ಲಿ ೧ ಕೋಟಿ ಸದಸ್ಯರನ್ನು ನೋಂದಾಯಿಸಿದ್ದೇವೆ ಎಂದರು.
ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯು ೫ ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಅತೀ ದೊಡ್ಡ ಸಾಮಾಜಿಕ ಭದ್ರತಾ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಆವರ್ತ ನಿಧಿ ೧೦.೫೦ ಲಕ್ಷ ಕೋಟಿ ರೂ.ಗಳಾಗಿದೆ.
ಆನ್ ಲೈನ್ ಮೂಲಕ ಸೇವೆಗಳನ್ನು ಸರಳೀಕೃತ ಮಾಡಲಾಗುತ್ತಿದೆ ಎಂದರು.

ಬೈಟ್: ಬಂಡಾರು ದತ್ತಾತ್ರೇಯ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ

ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕೂಗಿದರು. ಇಂದು ನಾವು ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಭಾರತ ಬಿಟ್ಟು ತೊಲಗು ಎಂಬ ಘೋಷಣೆ ಮಾಡಬೇಕಿದೆ ಎಂದು ಸಾಂಖ್ಯಿಕ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಬೈಟ್: ಡಿ.ವಿ. ಸದಾನಂದಗೌಡ, ಸಾಂಖ್ಯಿಕ ಸಚಿವ.

ಒಟ್ಟಿನಲ್ಲಿ ಕ್ವೀಟ್ ಇಂಡಿಯಾ ಚಳುವಳಿಯ ವಜ್ರ ಮಹೋತ್ಸವವು ದೇಶಾದ್ಯಂತ ಸಂಭ್ರಮದಿಂದ ಆಚರಿಸಲ್ಪುಡುತ್ತಿದೆ, ಇಂತಹ ಕಾರ್ಯಕ್ರಮಗಳು ಸಾಂಕೇತಿಕವಾಗಿ ಆಚರಿಸದೇ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತಾದಾಗ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರಲಿದೆ.

LEAVE A REPLY

Please enter your comment!
Please enter your name here