ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ

0
207

ಬಳ್ಳಾರಿ/ಹೊಸಪೇಟೆ:ವಿಜಯನಗರ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.
ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಶಾಸಕ ಆನಂದ್ ಸಿಂಗ್ ಕೈಗೊಂಡಿರುವ ಗ್ರಾಮ ವಾಸ್ತವ್ಯ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಜರುಗಿದ ಸಮಾರಂಭದಲ್ಲಿ ಆನಂದ್ ಲಕ್ಷ್ಮಿ ಲಕ್ಕಿ ಡಿಪ್ ಮೂಲಕ 3 ಜನ ಆಟೋ ಚಾಲಕರಿಗೆ ಉಚಿತವಾಗಿ ಆಟೋಗಳನ್ನು ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ದಿಯೇ ನನ್ನ ಮುಖ್ಯ ಗುರಿ. ಅಭಿವೃದ್ಧಿಯಲ್ಲಿ ಎಂದೂ ನಾನು ರಾಜಕೀಯ ಮಾಡಿಲ್ಲ. ಮಾಡುವುದು ಇಲ್ಲ. ಗ್ರಾಮ ವಾಸ್ತವ್ಯ, ಲಕ್ಕಿ ಡಿಪ್ ಮೂಲಕ ಉಚಿತ ಆಟೋಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು ಕೆಲವರು ರಾಜಕೀಯ ಗಿಮಿಕ್ ಎಂದು ಹೇಳುತ್ತಾರೆ. ಯಾರು ಎನೇ ಹೇಳಿದರೂ ನನಗೆ ಸರಿ ತೋರಿಸಿದ್ದನ್ನು ನಾನು ಮಾಡುತ್ತೇನೆ. ಕ್ಷೇತ್ರದ ಜನತೆಯ ಬೆಂಬಲ ಇರುವವರಿಗೆ ನನಗೆ ಯಾರು ಏನು ಮಾಡಲು ಆಗುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಇದೇ ರೀತಿ ಸಹಕಾರ ನೀಡಿದರೆ, 1 ಲಕ್ಷ ಮತಗಳ ಅಂತರದಿಂದ ಗೆದ್ದು ಬಂದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಆನಂದ್ ಲಕ್ಷ್ಮಿ ಡಿಪ್ ಮಾಲಕ ಆಯ್ಕೆಯಾದ ಜಂಬುನಾಥನಹಳ್ಳಿ ರಸ್ತೆಯ ಹೆಚ್.ಸಂತೋಷ್, ಕೊಂಡನಾಯ್ಕನಹಳ್ಳಿಯ ಕೆ.ಎಲ್.ರಾಕೇಶ್ ಹಾಗೂ ನೇತಾಜಿ ನಗರ ಗೋಪಿ ಅವರಿಗೆ ಆಟೋಗಳನ್ನು ವಿತರಿಸಿದರು. ಅಲ್ಲದೆ ತನ್ನ ಕೈಯ ಮೇಲೆ ಶಾಸಕರ ಹೆಸರು ಹಾಕಿಸಿಕೊಂಡ ಅಭಿಮಾನಿ ತಾಯಪ್ಪ ಎಂಬುವವರಿಗೆ ಕೂಡ ಉಚಿತವಾಗಿ ಆಟೋ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪ.ಸದಸ್ಯೆ ಜಯಕುಮಾರಿ, ನಗರಸಭೆ ಉಪಾಧ್ಯಕ್ಷೆ ಸುಮಂಗಳಮ್ಮ, ಮಾಜಿ ಶಾಸಕ ರತನ್ ಸಿಂಗ್, ಬಿಜೆಪಿ ಮುಖಂಡರುಗಳಾದ ಬಿ.ಎಸ್.ಜಂಯಯ್ಯ ನಾಯಕ, ಅಶೋಕ ಜೀರೆ, ರಾಮಚಂದ್ರ, ಸಂದೀಪ್ ಸಿಂಗ್, ಧರ್ಮೇಂದ್ರ ಸಿಂಗ್, ಕವಿತಾ ಈಶ್ವರ್ ಸಿಂಗ್ ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here