ಖಂಡಿತ ಗೆದ್ದುಬರುವೆ ಎಂದ ಮಾಜಿ ಶಾಸಕ ಜೆಎನ್ಎಸ್..

0
150

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ರುಮಾಲೆ ಚತ್ರ ಸಮೀಪದ ಗಣೇಶನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತಯಾಚನೆಗೆ ಚಾಲನೆ ಕೊಟ್ಟ ಬಿಜೆಪಿ ಅಭ್ಯರ್ಥಿ ,ಮಾಜಿ ಶಾಸಕ ಜೆ.ನರಸಿಂಹಸ್ವಾಮಿ.

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು, ಕಾರಣ ಇತ್ತೀಚೆ ಗಷ್ಟೇ ಪಕ್ಷದಲ್ಲಿ ಹೊಸ ಅಭ್ಯರ್ಥಿಗಳು ಎಂದು ವಕೀಲರಾದ ರವಿಮಾವಿನಕುಂಟೆ ಮತ್ತು ಬೆಂಗಳೂರು ಮೂಲದ ಅನೀಲ್ ಕುಮಾರ್ ಗೌಡರ ಹೆಸರುಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲೇ ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲೂ ಸಾಕಷ್ಟು ಚರ್ಚಾಗ್ರಾಸವಾಗಿತ್ತು.
ಆದರೆ ಪಕ್ಷದ ಅಭ್ಯರ್ಥಿ ನಾನೆ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಮತಯಾಚನೆ ವಿಲಂಬಕ್ಕೆ ಕಾರಣ ನನ್ನ ತಂದೆ ಮಾನ್ಯ ಜಾಲಪ್ಪನವರ ಆಶೀರ್ವಾದ ಮತ್ತು ಪಕ್ಷದ ವರಷ್ಟರ ಅಧಿಕೃತ ದಿನಾಂಕಕ್ಕಾಗಿ ಕಾಯುತ್ತಿದ್ದೆ ಅದಲ್ಲದೆ ಈ ದಿನ ಶುಭ ಮುಹೂರ್ತ ಎಂದರೇ ತಪ್ಪಾಗಲಾರದು ಕಾರಣ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದಂದೆ ವಿಜ್ಞವಿನಾಯಕನಿಗೆ ಪೂಜೆ ಸಲ್ಲಿಸಿ ಮಾತಯಾಚನೆ ಪ್ರಾರಂಭಿಸಿದ್ದೇನೆ.

ಅಲ್ಲದೇ ಈ ಗಳಿಗೆಯಲ್ಲಿ ನನ್ನಮೇಲಿನ ಪ್ರೀತಿ, ವಿಶ್ವಾವನ್ನಿಟ್ಟು ನನಗೆ ಆಶೀರ್ವಾದ ಮಾಡಲು ಬಂದಿರುವ ನೂರಾರು ಸಂಖ್ಯೆಯ ನನ್ನ ಅತ್ಮೀಯರೆಲ್ಲಾ ಇದೇ ಈತಿಯಾಗಿ ನನ್ನಜೊತೆ ನಿಮ್ಮ ಸಹಕಾರ ಹೀಗೆ ಇರಲಿ ಚುನಾವಣೆಯಲ್ಲಿ ಖಂಡಿತವಾಗಿ ಜಯಶಾಲಿ ಯಾಗುತ್ತೇನೆ ಎಂಬ ಬರವಸೆಯನ್ನು ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here