ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

0
145

ಕೋಲಾರ / ಬಂಗಾರಪೇಟೆ : ಇಲ್ಲಿನ ಪ್ರತಿಷ್ಠಿತ ಕೇಂದ್ರ ಸರ್ಕಾರದ ಬೆಮೆಲ್ ಕಾರ್ಖಾನೆ‌ ಖಾಸಗೀಕರಣ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು, ಸಾರ್ವಜನಿಕ ಉದ್ದಿಮೆಯ ಕಾರ್ಖಾನೆಯನ್ನು ಕಾಪಾಡಿ, ಬೆಮೆಲ್ ಕಾರ್ಖಾನೆ ಖಾಸಗೀಕರಣಗೊಳಿಸಲು ಬಿಡುವುದಿಲ್ಲ ಎಂದು ಆಗ್ರಹಿಸಿ ಕಾರ್ಖಾನೆ ಮುಂದೆ ಕೆಲಸಕ್ಕೆ ಹೋಗದೆ ಪ್ರತಿಭಟನೆ ನಡೆಸಲಾಯಿತು, ಬುದುವಾರ ಕಾರ್ಖಾನೆ ಗೆ ಕೇಂದ್ರದ ಆರು ಜನ ಬೇಟಿ ನೀಡಿ ಮೌಲ್ಯಮಾಪನ ನಡೆಸಲು ಆಗಮಿಸಬೇಕಾಗಿತ್ತು, ಈ ವಿಷಯ ತಿಳಿದ ತಕ್ಷಣ ಕಾರ್ಖಾನೆ ಮುಂದೆ ಎಲ್ಲಾ ಎಂಟು ಗೇಟ್ಗಳ ಮುಂಭಾಗ ನೂರಾರು ಮಂದಿ ಕಾರ್ಮಿಕರು ಪ್ರತಿಭಟನೆ ನಡೆಸಿ ಅಧಿಕಾರಿಗಳ ತಂಡ‌ ಬೇಟಿ ನೀಡಿದರೆ ವಾಪಸ್ ಕಳುಹಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು, ಅಧಿಕಾರಿಗಳಿಗೆ ಪ್ರವೇಶ ನೀಡದೆ‌ ಕಂಪನಿ‌ ಎದುರು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿದು ಅಧಿಕಾರಿಗಳ ತಂಡ ಆಗಮಿಸಲಿಲ್ಲ, ಬೆಳಿಗ್ಗೆ 10 ಗಂಟೆಗೆ ಅಧಿಕಾರಿಗಳ ತಂಡ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಇತ್ತು, ಆದರೆ ಕಾರ್ಮಿಕರು ಪ್ರತಿಭಟನೆ ತಿಳಿದು ಈ ಕಡೆ ಅಧಿಕಾರಿಗಳು ತಲೆ ಹಾಕಲಿಲ್ಲ, ಖಾಸಗೀಕರಣ ಹಿನ್ನೆಲೆ ಕಾರ್ಖಾನೆಯನ್ನ ಮೌಲ್ಯಮಾಪನ ಮಾಡಲು ಕೇಂದ್ರದ ಅಧಿಕಾರಿಗಳ ತಂಡ ಆಗಮಿಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿತ್ತು,. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು, ಬೆಮೆಲ್ ಕಾರ್ಮಿಕ ಸಂಘ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ವನ್ನ ತೀವ್ರ ತರಾಟೆಗೆ ತೆಗೆದುಕೊಂಡರು.

LEAVE A REPLY

Please enter your comment!
Please enter your name here