ಖಾಸಗೀ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟನೆಗೆ ಒತ್ತಾಯದ ಸಮಾಲೋಚನಾ ಸಭೆ

0
122

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಖಾಸಗೀ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ದರಪಟ್ಟಿ ಪ್ರದರ್ಶಿಸಬೇಕೆಂಬ ಕರವೇ ಪ್ರವೀಣ್ ಕುಮಾರ್ ಶೆಟ್ಟ ಬಣದ ಒತ್ತಾಯದ ಹಿನ್ನಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ ನಗರದ ಪ್ರವಾಸಿ ಮಂದಿರದಲ್ಲಿ ಕರವೇ ಹೋರಾಟಗಾರನ್ನು,ಖಾಸಗೀ ಆಸ್ಪತ್ರಗಳ ಆಡಳಿತ ಮತ್ತು ವೈದ್ಯರುಗಳನ್ನು ಸಭೆ ಕರೆಯಲಾಗಿತ್ತು.

ಖಾಸಗೀ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಣೆಗೆ ಒತ್ತಾಯಿಸುತ್ತಿರುವ ಕರವೇ ಹೋರಾಟಗಾರರ ಒತ್ತಾಯ ನ್ಯಾಯಯುತವಾಗಿದೆ. ಆಹಿನ್ನಲೆಯಲ್ಲಿ ಸರ್ಕಾರ ಈಗಾಗಲೇ ಖಾಸಗೀ ಪ್ರಯೋಗಾಲಯಗಳಗೆ ದರ‌ನಿಗಧಿಯ ಆದೇಶದ ಪ್ರತಿಯನ್ನು ರವಾನಿಸಿದೆ ಎಂದರು.
ಖಾಸಗೀ ಆಸ್ಪತ್ರೆಗಳ ಅವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸುತ್ತಾ ಈಗಾಗಲೇ ನಗರದಲ್ಲಿನ ಬಹಳಷ್ಟು ಖಾಸಗೀ ಆಸ್ಪತ್ರೆಗಳ ಬಗ್ಗೆ ಹೆಚ್ಚಿನ ಹಣವಸೂಲಿ,ಸ್ವಚ್ಚತೆಯ ಕೊರತೆ, ಮಾನದಂಡಗಳ ಉಲ್ಲಂಘನೆಯ ಬಗ್ಗೆ ದೂರುಗಳಿವೆ ಎಂದರು. ಅಂತಹ ಆಸ್ಪತ್ರೆಗಳ ವಿರುದ್ದ ಈಗಾಗಲೇ ನೋಟಿಸು ಜಾರಿಮಾಡಲಾಗಿದೆ ಎಂದರು. ಇನ್ನಾದರೂ ಎಚ್ಚೆತ್ತು ಆಸ್ಪತ್ರೆಗಳ ಪರವಾನಗಿಗಳನ್ನು ಕಾಲಕಾಲಕ್ಕೆ ನವೀಕರಣ ಗೊಳಿಸಿಕೊಳ್ಳುವುದರೊಂದಿಗೆ ಮಾನದಂಡಗಳನ್ನು ಪಾಲಿಸಿ ಜನಸಾಮಾನ್ಯರಿಗೆ ಉಪಯುಕ್ತರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಹೋರಾಟಕ್ಕೆ ಮಣಿದ ಸರ್ಕಾರ ಖಾಸಗೀ ಪ್ರಯೋಗಾಲಯಗಳ ರಕ್ತಪರೀಕ್ಷೆ ಮುಂತಾದವುಗಳಿಗೆ ದರನಿಗಧಿಪಡಿಸಿದೆ,ಮುಂದಿನ ದಿನಗಳಲ್ಲಿ ಆಸ್ಪತ್ರಯಲ್ಲಿನ ಚಿಕಿತ್ಸೆಗಳ ದರಪಟ್ಟಿಯನ್ನೂ ಪ್ರಕಟಿಸುವಂತಹ ಆದೇಶ ಸರ್ಕಾರ ನೀಡಲಿದೆ ಎಂಬ ಬರವಸೆ ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ್ದಾರೆ.

LEAVE A REPLY

Please enter your comment!
Please enter your name here