ಗಂಗಾಮತ ಹಿತೈಷಿ ಸಿಎಂ.ಸಿದ್ದು

0
396

ಬಳ್ಳಾರಿ /ಹೊಸಪೇಟೆ:ಗಂಗಾಮತ ಸಮಾಜದ ಮೇಲೆ ಅತೀವ ಕಾಳಜಿ ಹೊಂದಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು, ಗಂಗಾಮತ ಸಮಾಜವನ್ನು ಎಸ್‌ಟಿ ಸೇರ್ಪಡೆಗಾಗಿ ಸಂಕಲ್ಪ ಗೈದ ರಾಜ್ಯದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಮೀನುಗಾರಿಕೆ ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಣ್ಣಿಸಿದರು.

ನಗರದ ಕಬ್ಬೇರುಪೇಟೆಯ ಶ್ರೀಗಾಳೆಮ್ಮ ಮತ್ತು ಶ್ರೀಶಂಕರಮ್ಮ ದೇವಸ್ಥಾನದ ಪ್ರಾಗಂಣದಲ್ಲಿ ಭಾನುವಾರ ಆಯೋಜಿಸಿದ್ದ ಗಂಗಾಮತ ಜಯಂತ್ಯೋತ್ಸವ ಹಾಗೂ ಸಮಾಹಿಕ ವಿವಾಹ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.

ಗಂಗಾಮತ ಸಮಾಜದ ಒಟ್ಟು 9 ಉಪಜಾತಿಗಳನ್ನು ಎಸ್‌ಟಿ ಗೆ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಹಿಸಿದ್ದ ಸಿಎಂ ಸಿದ್ಧರಾಮಯ್ಯ ಅವರು, ಗಂಗಾಮತ ಸಮಾಜದ ಮೇಲೆ ಅತೀವ ಕಾಳಜಿ ಹೊಂದಿದ್ದಾರೆ. ಆದರೆ, ಕೇಂದ್ರ ಸರ್ಕಾರ, ಪ್ರಸ್ತಾವನೆಯಲ್ಲಿ ಕೆಲವು ನೂನ್ಯತೆಗಳು ಎಂಬ ನೆಪ ಹೇಳಿ, ಮರಳಿ ಕಳಹಿಸಿದ್ದ ಪ್ರಸ್ತಾವನೆಯನ್ನು ಪುನಃ ನಾನು ಕೇಂದ್ರಕ್ಕೆ ಕಳಹಿಸಿದ್ದು, ಕೇಂದ್ರ ಸರ್ಕಾರದ ಮೇಲೆ ಜವಬ್ದಾರಿಯಿದ್ದು, ಕಾದು ನೋಡಬೇಕಿದೆ ಎಂದು ಹೇಳಿದರು.

ನಗರದಲ್ಲಿರುವ ಗಂಗಾಮತ ಸಮಾಜದ ನಿವೇಶನದಲ್ಲಿ ಸುಸಜ್ಜಿತ ಸಮುದಾಯ ಭವನ ಹಾಗೂ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದ ಅವರು, ಗಂಗಮತ ಸಮಾಜಕ್ಕೆ ಸೇರಿದ ನಾನು ಸಮಾಜ ಋಣು ತೀರಿಸಲು,ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಚೌಡಯ್ಯದಾನಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಟದ ಶ್ರಿ ಶಾಂತಭೀಷ್ಮ ಮಹಾಸ್ವಾಮಿಜಿ, ಪರಮಾನಂದವಡಿ ಬ್ರಹ್ಮಾನಂದ ಆಶ್ರಮದ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ ಸಾನಿದ್ಯವಹಿಸಿ, ಆರ್ಶಿವಚನ ನೀಡಿದರು. ಶಾಸಕ ಅನಿಲ್ ಲಾಡ್, ಜಿಪಂ ಸದಸ್ಯ ಪ್ರವೀಣ ಸಿಂಗ್, ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್, ಸದಸ್ಯರಾದ ಗುಜ್ಜಲ್ ನಿಂಗಪ್ಪ, ಟಿ.ಚಿದಾನಂದ, ಕೆ.ಗೌಸ್, ಗಂಗಾಮತ ಸಮಾಜದ ಮುಖಂಡರಾದ ಬಿ.ಮೌಲಾಲಿ, ಶಿವಶರ ಬಾರ್‌ಕೀರ, ತಮ್ಮನಾಳಪ್ಪ, ಕೆ.ಎಂ.ಅಶೋಕ, ಅಭಿಮನ್ಯು, ಮಡ್ಡಿ ಹನುಮಂತಪ್ಪ, ಕೆ.ಜಿ.ಬಸವರಾಜ, ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಂಗೀತ ಕಲಾವಿದ ಶರಣಪ್ಪ ವಟ್ಟಗಲ್ ನಾಡಗೀತೆ ಪ್ರಸ್ತುತಪಡಿಸಿದರು. ಸಮಾಜದ ಯುವಮುಖಂಡ ಮಡ್ಡಿ ಮಂಜುನಾಥ ಸ್ವಾಗತಿಸಿದರು. ವೈ.ಯಮುನೇಶ ನಿರೂಪಿಸಿದರು. ಗಂಗಾಮತ ಜಯಂತ್ಯೋತ್ಸವ ಅಂಗವಾಗಿ ಗಂಗಾಮಾತೆ ಭಾವಚಿತ್ರ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ 9ಜೋಡಿ ನವವಧುವರರು, ಹೊಸ ದಾಂಪತ್ಯಕೆ ಕಾಲಿಟ್ಟರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಆಧಿಕ ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಮಾನಿಸಿ, ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here