ಗಂಡನಿಗಾಗಿ ಧರಣಿ ಕುಳಿತ ಹೆಂಡತಿ..

0
178

ಚಾಮರಾಜನಗರ/ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯ ಮುಡಿಗುಂಡ ಗ್ರಾಮದ ಮಹೇಶ್ ಎಂಬುವವರ ಪತ್ನಿ ನೀಲಾ ಮನೆಯವರ ಒತ್ತಡಕ್ಕೆಬಿಟ್ಟು ಹೋಗಿರುವ ಗಂಡನನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಗಂಡನ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ಜರುಗಿದೆ.

ಕಳೆದ 12 ವಷ೯ಗಳಿಂದ ತಮ್ಮದೆ ಗ್ರಾಮದ ಮಹೇಶ್ ಎಂಬುವವರನ್ನು ಪ್ರೀತಿಸುತ್ತಿದ್ದ ನೀಲಾ ಮದುವೆಗೆ ಮಹೇಶ್ ಅವರ ತಂದೆ ತಾಯಿ ಹಾಗೂ ಕುಟುಂಬದವರ ವಿರೋಧವಿದ್ದ ಕಾರಣ ಕಳೆದ ೬ ತಿಂಗಳ ಹಿಂದೆ ಪ್ರೀತಿಸುತ್ತಿದ್ದ ಮಹೇಶ್ ಜೊತೆ ಹೋಗಿ ಬೆಂಗಳೂರಿನ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಹೀಗಿರುವಾಗ ಕಳೆದ ತಿಂಗಳು ಊರಿಗೆ ಹೋಗಿ ಬರುತ್ತೇನೆಂದು ಬಂದ ಮಹೇಶ್ ಬೆಂಗಳೂರಿಗೆ ಹಿಂದಿರುಗದೆ ಇದ್ದ ಕಾರಣ ಸ್ವತಃ ನಾನೇ ಮುಡಿಗುಂಡ ದ ನನ್ನ ಪತಿ ಮಹೇಶ್ ಮನೆಗೆ ಬಂದು ವಿಚಾರಿಸಲಾಗಿ ತಿಳಿದು ಬಂದ ಸತ್ಯ ಎಂದರೆ ಮಹೇಶ್ ರನ್ನು ಅವರ ಮನೆಯವರು ಜಾತಿ ಕಾರಣ ಮುಂದೊಡ್ಡಿ ಬೆದರಿಸಿ ಅವರ ಸಂಭಂಧಿಕರ ಮನೆಯಲ್ಲಿ ಇರಿಸಿರುವ ವಿಷಯ ತಿಳಿದು ನನಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳಲು ನಾನು ಪಿ.ಎಂ.ಪಿ.ಆರ್ ಎಂಬ ಮಹಿಳಾ ಸಾಂತ್ವನ ಕೇಂದ್ರ ದವರಿಗೆ ದೂರು ನೀಡಿ ಅವರ ಜೊತೆಗೂಡಿ ಪಟ್ಟಣ ಪೋಲಿಸ್ ಠಾಣೆಗೆ ಹೋಗಿ ನನ್ನ ಗಂಡ ಮಹೇಶ್ ನನ್ನು ಹುಡುಕಿ ನನ್ನ ಜೊತೆ ಸಂಸಾರ ಮಾಡುವಂತೆ ತಿಳಿ ಹೇಳಿ ಎಂದು ದೂರು ನೀಡಿದ್ದೆನೆ ಎಂದು ಹೇಳುವ ನೀಲಾ ಗಂಡ ಮಹೇಶ್ ನನಗೆ ಸಿಕ್ಕವವರೆಗೂ ನಾನು ಅವರ ಮನೆ ಮುಂದೆಯೇ ಧರಣಿ ಕೂರುವುದಾಗಿ ತಿಳಿಸಿದರು. ಈ ಸಂಭಂಧ ಗ್ರಾಮದ ಮುಖಂಡರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಅದಕ್ಕೆ ಒಪ್ಪದ ನೀಲಾ ತನ್ನ ಪತಿ ಮಹೇಶ್ ಮನೆ ಮುಂದೆಯೇ ಧರಣಿ ಕುಳಿತು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

LEAVE A REPLY

Please enter your comment!
Please enter your name here