ಗಡಿನಾಡಲ್ಲಿ…. ಗೂಂಡಾಕೃತ್ಯ..???

0
396

* ಈ ಮಾರಾಮಾರಿ ನೋಡಿದ್ರೆ ನಿಮ್ಮ ಮೈ ಜುಮ್ ಎನ್ನುತ್ತೆ !

* ಪೊಲೀಸರ ಮುಂದೆಯೇ ಲಾಂಗು ಮಚ್ಚು ಬೀಸಿದ್ದೂ ನೋಡಿದ್ರೆ ಮೈ ನಡುಗುತ್ತೆ !

* ಪತ್ನಿಯ ಊರಿನಲ್ಲಿ ಬಿಲ್ಡಪ್ ಕೊಡಲು ಹೋಗಿ ಗುಮ್ಮಿಸಿಕೊಂಡ ಬಳ್ಳಾರಿ ಮಹಾಪೌರ !

* ಬೀಗರ ಜಗಳ ಬಿಡಿಸಲು ಹೋದ ವೇಳೆ ಮೇಯರ್ ನನ್ನು ಅಟ್ಟಾಡಿಸಿ ಓಡಾಡಿಸಿದ್ರೂ !

* ಅಧಿಕಾರ ದುರ್ಬಳಕೆಯಲ್ಲಿ ಕಾರು ಜಖಂ ಆದ್ರೂ ಮೇಯರ್ ನನ್ನು ಪ್ರಶ್ನೆಯೇ ಮಾಡದ ಜಿಲ್ಲಾಡಳಿತ !

* ಮಹಾಪೌರನ ಮಾರಾಮಾರಿ,, ನಿಮ್ಮ ನಮ್ಮೂರು ಟಿವಿಯಲ್ಲಿ ಮಾತ್ರ !

ಬಳ್ಳಾರಿ /ಬಳ್ಳಾರಿ: ಆತ ಮಹಾನಗರ ಪಾಲಿಕೆಯ ಮೇಯರ್. ಮೇಲಾಗಿ ರಾಜ್ಯ ಸಚಿವರೊಬ್ಬರ
ಬಲಗೈ ಬಂಟ, ಹೀಗಾಗೇ ಪತ್ನಿಯ ಊರಿನಲ್ಲಿ ಅಧಿಕಾರದ ಗತ್ತು ದರ್ಪ ತೋರಿಸಲು ಹೋಗಿ ಗುಮ್ಮಿಸಿಕೊಂಡು ಬೆಪ್ಪನಾಗಿ ಬಂದ ಮಹಾ ಪೌರರ ಸ್ಟೋರಿಯಿದೂ, ಅಷ್ಟಕ್ಕೂ ಈ ಮಹಾ ಪೌರರ ಮಾರಾಮಾರಿ ದೃಶ್ಯ ನೋಡಿದ್ರೆ ನಿಮ್ಮ ಮೈಜುಮ್ಮ ಎನ್ನುತ್ತೆ, ಪೊಲೀಸರ ಮುಂದಯೇ ಹೆಂಗಲ್ಲಾ ಲಾಂಗು ಮಚ್ಚು ಬೀಸಿದ್ರೂ ಅನ್ನೋದನ್ನ ನೋಡಿದ್ರೆ ಮೈ ನಡುಗುತ್ತೆ, ಅಷ್ಟಕ್ಕೂ ಪತ್ನಿಯ ಊರಿನಲ್ಲಿ ಬಿಲ್ಡಪ ಕೊಡಲು ಹೋದ ಮೇಯರ್ ಯಾರು? ಹೆಂಗೆಲ್ಲಾ ಮಾರಾ ಮಾರಿ ನಡೆಯಿತೂ ಅನ್ನೋ ಸ್ಟೋರಿ ಇಲ್ಲಿದೆ ನೋಡಿ,
ಅಬ್ಬಾ ಈ ದೃಶ್ಯ ನೋಡಿದ್ರೆ ಮೈಜುಮ್ಮ ಅನ್ನುತ್ತಲ್ಲಾ, ಯಾರಪ್ಪ ಇವರು ಪೊಲೀಸರ ಮುಂದೆ ಹಿಂಗೆಲ್ಲಾ ಲಾಂಗು ಮಚ್ಚು ಬಿಸ್ತಾರೆ ಅಂತಿರಲ್ವಾ. ಹೌದು. ಇದೂ ನಮ್ಮ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ವೆಂಕಟರಮಣ ರವರ ಬೀಗರ ಜಗಳ ನೋಡಿ, ಈ ಘಟನೆ ನಡೆದಿರುವುದು ಬಳ್ಳಾರಿ ಪಕ್ಕದ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಾಳ ಗ್ರಾಮದಲ್ಲಿ, ಆದ್ರೆ ಆಂದ್ರದ ಬೊಮ್ಮನಾಳದ ಬೀಗರ ಜಗಳದಲ್ಲಿ ಬಿಲ್ಡಪ ಕೊಡಲು ಹೋಗಿ ಬಳ್ಳಾರಿ ಮೇಯರ್ ಬೆಪ್ಪರಾಗಿ ಬಂದಿದ್ದಾರೆ. ಸ್ವಲ್ಪದರಲ್ಲೆ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ ಬಳ್ಳಾರಿ ಮೇಯರ್ ವೆಂಕಟರಮಣ, ಬೀಗರ ಜಗಳ ಬಿಡಿಸಲು ಹೋದ ವೇಳೆ ಮೇಯರ್ ಕಾರು ಮಾತ್ರ ಪುಡಿಪುಡಿಯಾಗಿ ಬಿಟ್ಟಿದೆ,

ಮೊಹರಂ ವಿಚಾರದಲ್ಲಿ ಬೊಮ್ಮನಾಳ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆಯುತ್ತಿತ್ತು. ಈ ಗಲಾಟೆಯಲ್ಲಿ ಮೇಯರ್ ಬೀಗರು ಅಂದ್ರೆ ವೆಂಕಟರಮಣ ಪತ್ನಿಯ ಸಂಭದಿಕರು ಜಗಳವಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದ್ದಂತೆ ಬಳ್ಳಾರಿ ಮೇಯರ್ ಬೊಮ್ಮನಾಳ ಗ್ರಾಮಕ್ಕೆ ತೆರಳಿದ್ದರು.

LEAVE A REPLY

Please enter your comment!
Please enter your name here