ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಂತಿ ಸಭೆ..

0
438

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ನಗರಸಭೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪುರಾಭಾವಿ ಸಭೆ.

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಾಗೂ ವಿಷಕಾರಿ ರಾಸಾಯನಿಕಗಳನ್ನು ಬಳಕೆ ಮಾಡಿರುವ ಗಣೇಶ ಮೂರ್ತಿ ಗಳನ್ನು ಮಾರಾಟ ಮಾಡುವಂತಿಲ್ಲವೆಂದು ಹಾಗೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಜರುಗಿಸಿವುದಾಗಿ ತಾಲ್ಲೂಕು ದಂಡಾಧಿಕಾರಿ ಗಂಗಪ್ಪ ತಿಳಿಸಿದರು.

25 ರಂದು ನಡೆಯಲ್ಲಿರುವ ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡಲು ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಮತ್ತು ಗಣೇಶ ಮೂರ್ತಿಗಳ ಮಾರಾಟ ಗಾರರೊಂದಿಗೆ ನಗರಸಭೆ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯನ್ನು ದ್ದೇಶಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಪರಿಸರ ಮಾಲೀನ್ಯ ನಿಯಂತ್ರಣದ ಆದೇಶದಂತೆ ಗಣೇಶನ ಹಬ್ಬದ ನಂತರ ಮೂರ್ತಿ ಗಳನ್ನು ಕೆರೆ ಕುಂಟೆಗಳಿಗೆ ಬಿಡುವುದರಿಂದ ನೀರು ವಿಷಪೂರಿತವಾಗುವ ಸಾಧ್ಯತೆಗಳಿದ್ದು ಇದರಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗಲಿವೆಂದು ತಿಳಿಸಿದ ಅವರು ಗಣೇಶ ಮಾರಾಟ ಮಾಡುವ ಮಾರಾಟಗಾರರು ಜೇಡಿ ಮಣ್ಣಿನಿಂದ ತಯಾರಿಸಿರುವ ಹಾಗೂ ರಾಸಯನಯುಕ್ತ ಬಣ್ಣಗಳನ್ನು ಬಳಸದೇ ಇರುವ ಮೂರ್ತಿ ಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಿದರು.

ಈ ವೇಳೆ ನಗರದ ಠಾಣೆ ಇನ್ಸ್ಪೆಕ್ಟರ್ ಹನುಮಂತಪ್ಪ ಮಾತನಾಡಿ ಗಣೇಶ ಚತುರ್ಥಿ ಹಬ್ಬವನ್ನು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಂಪ್ರಧಾಯವಾಗಿ ಹಬ್ಬಗಳನ್ನು ಅಚರಿಸಿ ಎಂದು ಅವರು ರಸ್ತೆ ಗಳಲ್ಲಿ, ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ಮೂರ್ತಿ ಗಳನ್ನು ಪ್ರತಿಷ್ಟಾಪನೆ ಮಾಡುವಾಗ ಸ್ಥಳದ ಮಾಲಿಕರಿಂದ ಒಪ್ಪಿಗೆ ಪಡೆಯಬೇಕು ಹಾಗೂ ಯಾವುದೇ ರೀತಿಯಲ್ಲಿ ಕಾನೂನಿಗೆ ಮೀರಿ ಹಬ್ಬ ಅಚರಿಸಿದರೆ ಅವರ ವಿರುದ್ಧ ಕಠಿಣಕ್ರಮತೆಗೆದು ಕೊಳ್ಳಾಗುತ್ತದೆ ಎಂದರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಜಾತ ಶಿವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ರಾಮಪ್ಪ ,ಡಿವೈಎಸ್ ಪಿ ಕೃಷ್ಣ ಮೂರ್ತಿ, ಸದಸ್ಯ ಬ್ಲೇಡ್ ಮಂಜು ,ಷಫೀಕ್ ,ಪೌರಾಯುಕ್ತ ಮುನಿ ಶಾಮಿ ,ಸೇರಿದಂತೆ ಗಣೇಶ ಮೂರ್ತಿ ಗಳ ಮಾರಾಟ ಗಾರರು ವಿವಿಧ ಜನಪರ ಸಂಘಟನೆಗಳ ಮುಖಂಡರು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here