ಗಣ್ಯರಿಂದ ಪೂಜಾಕಾರ್ಯ…

0
69

ಬೆಂಗಳೂರು/ಮಹದೇವಪುರ:- ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡಿನ ಬೆಮೇಲ್ ಬಡಾವಣೆಯ ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ, ಕುಂದಲಹಳ್ಳಿಯ ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಸಿ.ಎಂ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಹಾಗೂ ಉಪ ಸಭಾಪತಿ ಜೆ.ಕೆ ಕೃಷ್ಣರೆಡ್ಡಿ, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಆಷಾಡ ಅಮಾವಾಸ್ಯೆ ಹಾಗೂ ಸೂರ್ಯ ಗ್ರಹಣ ಪ್ರಯುಕ್ತ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೆಗೌಡ ರವರು ಮಾತನಾಡಿ ಬೆಂಗಳೂರಿನಲ್ಲಿ ಸಾಫ್ಟವೇರ್ ಸಂಸ್ಥೆಗಳನ್ನ ಪರಿಚಯಿಸಿದ್ದು ನನ್ನ ಅವದಿಯಲ್ಲಿ, ನನ್ನ ಪ್ರಧಾನಿ ಅವಧಿಯಲ್ಲಿ ಟಾಟಾ,ಐಟಿಸಿ, ಇನ್ಫೋಸಿಸ್ ಸೇರಿದಂತೆ ಮತ್ತಿತರ ಕಂಪೆನಿಗಳು ಪರಿಚಯಿಸಲಾಗಿತ್ತು,

ಪ್ರಸ್ತುತದ ಮೈತ್ರಿ ಸರ್ಕಾರ ನಡೆಸುವುದು ಸುಲಭವ ಮಾತು ಅಲ್ಲಾ, ಬೆಂಗಳೂರಿನ ೨೮ ಕ್ಷೇತ್ರಗಳು ಅಭಿವೃದ್ಧಿ ಆಗಬೇಕಾದರೆ ಪಕ್ಷತೀತವಾಗಿ ಕೆಲಸ ಮಾಡಬೇಕಾಗಿದೆ.
ದೇವರ ಅಶೀರ್ವಾದ ದಿಂದ ಅದಿಕಾರಕ್ಕೆ ಬಂದಿದೆವೆ.
ನಾನ ಪ್ರಧಾನಿಯಾಗಿದ್ದಾಗ ನನ್ನ ೧೦ ತಿಂಗಳು ಆಡಳಿತದಲ್ಲಿ ಒಂದು ಕಪ್ಪು ಚುಕ್ಕೆ ಬಂದಿಲ್ಲ ಎಂದರು.
ದೇವ ಶಕ್ತಿಯನ್ನು ನಂಬುತ್ತನೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ೨೮ ಕ್ಷೇತ್ರ ಗಳಲ್ಲಿ ಗ್ರಾಮ ಸಭೆಯನ್ನು ಸಿ.ಎಂ. ಮಾಡಲಿದ್ದಾರೆ.
ಸಮಸ್ಯೆಗಳ ಅಗಾರವಾಗಿರುವ  ಬೆಂಗಳೂರಿನ ಅಭಿವೃದ್ದಿಗೆ ಮೈತ್ರಿ ಸರಕಾರ ಶ್ರಮಿಸಲಿದೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರಕ್ಕೆ ಹೆಚ್ಚಿನ  ಅನುದಾನ ನೀಡುವ ಬಗ್ಗೆ ಸಿ.ಎಂ ಬಳಿ ಚರ್ಚಿಸಲಾಗುವುದು.
ಉಪ ಸಭಾಪತಿ ಜೆ.ಕೆ ಕೃಷ್ಣಾರೆಡ್ಡಿ ಅನುಭವಿ ರೀತಿಯಲ್ಲಿ ಸದನ ನಡೆಸಿದ್ದಾರೆ, ಸಾಕಷ್ಟು ಅವಕಾಶಗಳಿವೆ ಎಂದು ಅರೈಸಿದರು.

ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಮಾತನಾಡುತ್ತಾ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ರಾಜಕೀಯ ಅನುಭವದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರಿಂದ ಹಿಡಿದು ಯುವ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಮಹದೇಪುರ ಕ್ಷೇತ್ರ ದಿಂದ ಹೆಚ್ಚಿನ ತೆರಿಗೆ ಕಟ್ಟಲಾಗುತ್ತಿದ್ದು ಮೂಲಭೂತ ಸೌಕರ್ಯಗಳನ್ಮು ಕಲ್ಪಿಸಲು ಹೆಚ್ಚಿನ ಅನುಧಾನ ನೀಡುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮ ದಲ್ಲಿ ಸ್ಥಳೀಯ ಪಾಲಿಕೆ ಸದಸ್ಯೆ ಶ್ವೇತಾ ವಿಜಯಕುಮಾರ್, ಮುಖಂಡರು ಜೆ,ಕೆ ಜಯರಾಂ, ರಮೇಶ್, ಯುವ ಮೋರ್ಚಾ ಅಧ್ಯಕ್ಷ ರಾಜೇಶ್, ಹೂಡಿ ವಿಜಯ್ ಕುಮಾರ್ ಸೇರಿದಂತೆ  ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here