ಗಣ್ಯರಿಗೆ ಗೌರವ ಸನ್ಮಾನ…

0
89

ಚಿಕ್ಕಬಳ್ಳಾಪುರ/ ಚಿಂತಾಮಣಿ: 2019ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಮುಖಂಡರು ನೀಡುವ ಹಣ .ಹೆಂಡ ಮುಂತಾದ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಿ ಜನರ ಬಗ್ಗೆ ಕಾಳಜಿಯುಳ್ಳ ನಾಯಕನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಒಲವು ತೋರುತ್ತಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತಿಳಿಸಿದರು .

ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರುಕೋನಹಳ್ಳಿಯಲ್ಲಿ ಅದ್ಧೂರಿಯಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭಾಗದ ಜನತೆಗೆ ವರ್ತೂರು ಕೆರೆ ಕೆಸಿ ವ್ಯಾಲಿಯ ವಿಷಪೂರಿತ ನೀರನ್ನು ಕೊಟ್ಟು ಮೋಸ ಮಾಡಬೇಡ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಸಿದರು .

ಕೋಲಾರ ಕ್ಷೇತ್ರದ ಸಂಸದ ಕೆ.ಎಚ್.ಮುನಿ ಯಪ್ಪ ಮಾತನಾಡಿ ಈ ಭಾಗದ ಜನತೆಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದ್ದು ನನ್ನವ್ಯಾಪ್ತಿಯ ಎಲ್ಲ ಕಾರ್ಯ ಗಳನ್ನು ಪೂರ್ಣ ಗೊಳಿಸಿದ್ದೇನೆ ಮುಂದಿನ ದಿನಗಳಲ್ಲಿ ಇಸ್ರೆಯಲ್ ಮಾದರಿಯ ಶುದ್ಧೀಕರಣ ಘಟಕ ಸ್ಥಾಪಿಸಿ ಮೂರು ಹಂತದಲ್ಲಿ ಶುದ್ಧೀಕರಿಸಿ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಅಲ್ಲದೆ ಕೊರು ಕೋನಹಳ್ಳಿಯಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಿಸಲು ಹತ್ತು ಲಕ್ಷ ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ .ಕೃಷ್ಣಾರೆಡ್ಡಿ ಮಾತನಾಡಿದರು ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ನಾಯಕಿ ವಾಣಿ ಕೃಷ್ಣಾರೆಡ್ಡಿ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ರವರಿಗೆ ಗ್ರಾಮಸ್ಥರಿಂದ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು .

LEAVE A REPLY

Please enter your comment!
Please enter your name here