ಗಾಯಕಿ ಸುಹಾನಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ

0
175

ಬೆಂ,ಗ್ರಾಂ,ಜಿಲ್ಲೆ/ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ರಾಜಘಟ್ಟ ರವಿ ರವರ ನೇತೃತ್ವದಲ್ಲಿ ಪ್ರತಿಭಟನೆ
ಸುಹಾನ ಸೈಯದ್ ರವರಿಗೆ ಗೃಹ ಸಚಿವರು ಈ ಕೂಡಲೇ ಅವರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ
ಸರಿಗಮಪ ಲಿಟಲ್ ಚ್ಯಾಂಪ್ಸ್ ನಲ್ಲಿ ಸುಹಾನ ಸೈಯದ್ ಹಿಂದೂ ಹಾಡು ಹಾಡಿದ್ದಕ್ಕೆ ಕೆಲ ಮುಸ್ಲಿಂ ಮೂಲಭೂತವಾದಿಗಳು ಬೆದರಿಕೆ ಹಾಕಿದ್ದನ್ನ ವಿರೋಧಿಸಿ ಹಿಂದೂ-ಮುಸ್ಲಿಂ ಬಂಧುಗಳು ಪ್ರತಿಭಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ರಾಜಘಟ್ಟ ರವಿ ರವರು ಸಲ್ಮಾನ್ ಖಾನ್ , ಶಾರೂಖ್ ಖಾನ್ ಹಾಗೂ ಅಮೀರ್ ಖಾನ್ ರನ್ನು ವಿರೋಧಿಸದೆ ಒಬ್ಬ ಹೆಣ್ಣು ಮಗಳಿಗೆ ಬೆದೆರಿಕೆ ಹಾಕಿದ್ದನ್ನು ತೀವ್ರವಾಗಿ ಖಂಡಿಸಿದರು
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಜಘಟ್ಟ ರವಿ , ತಾಲ್ಲೂಕು ಅಧ್ಯಕ್ಷ ಪು.ಮಹೇಶ್ , ಪ್ರ.ಕಾರ್ಯದರ್ಶಿ ಬಷೀರ್ , ಉಪಾಧ್ಯಕ್ಷ ವೇಣು , ಕಾರ್ಯಧ್ಯಕ್ಷ ಹಮಾಮ್ ಪ್ರಕಾಶ್ , ಜೋಗಿಹಳ್ಳಿ ಅಮ್ಮು , ಚರಣ್ , ಸುಹಾಸ್ , ಮುಖೇಶ್ ಹಾಗೂ ಯಶ್ ಅಭಿಮಾನಿಗಳ ಸಂಘದ ಯಶವಂತ್ ರವಿ ಭಾಗವಹಿಸಿದರು

LEAVE A REPLY

Please enter your comment!
Please enter your name here