ಗಾರ್ಮೆಟ್ಸ್ ಮುಂದೆ ಶವವಿಟ್ಟು ಪ್ರತಿಭಟನೆ.

0
296

ಬೆಂಗಳೂರು/ಮಹದೇವಪುರ: ರಾಜ್ಯ ಕಾರ್ಮಿಕ ಆರೋಗ್ಯ ವಿಮೆಗೆ ಕೈಗಾರಿಕೆಯೊಂದು ಹಣ ಬರಿಸದ ಹಿನ್ನಲೇ ಗಾರ್ಮೆಟ್ಸ್ ಕಾರ್ಮಿಕರೊಬ್ಬರಿಗೆ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದು ಆಕ್ರೋಶಗೊಂಡ ಕಾರ್ಮಿಕರು ಗಾರ್ಮೆಟ್ಸ್ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸತ್ಯಾರಾಣಿ(38) ಕಾಡುಗುಡಿಯ ಚನ್ನಸಂದ್ರದ ನಿವಾಸಿಯಾದ ಈಕೆ, ಎನ್ಜಿಎಫ್ ಎಸ್ಟೇಟ್ ಬಳಿಯಿರುವ ಕಲರ್ ಲೈನ್ಸ್ ಗಾರ್ಮೆಟ್ಸ್ ಕಾರ್ಖನೆಯಲ್ಲಿ ಸುಮಾರು 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು, ಈ ಹಿನ್ನೆಲೆ ಚಿಕಿತ್ಸೆಗಾಗಿ ಕಾರ್ಮಿಕರಿಗೆ ಮೀಸಲಿರುವ ಇಎಸ್ಐ ಆಸ್ಪತ್ರೆಗೆ ತೆರಳಿದ್ದಾರೆ. ಕಲರ್ ಲೈನ್ಸ್ ಗಾರ್ಮೆಟ್ಸ್ ಕಾರ್ಖನೆಯ ಕಾರ್ಮಿಕ ಆರೋಗ್ಯ ವಿಮೆ ಪಾವತಿಸದಿರಿವುದು ಬೆಳಕಿಗೆ ಬಂದಿದೆ. ಅಲ್ಲದೆ ಇಎಸ್ಐ ಆಸ್ಪತ್ರೆಯಲ್ಲಿ ಸತ್ಯಾರಾಣಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಈಕೆ ಬಡವರಾಗಿರುವದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

ಸಹದ್ಯೋಗಿ ಮೃತ್ತಪಟ್ಟ ವಿಷಯ ತಿಳಿದು ಆಕ್ರೋಶಗೊಂಡ ಸಂಸ್ಥೆಯ ಕಾರ್ಮಿಕರು ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೃತ ಸತ್ಯಾರಾಣಿಯ ಶವವನ್ನು ಅಯ್ಯಪ್ಪನಗರದಲ್ಲಿರುವ ಕಾರ್ಖಾನೆಯ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ವೇಳೆ ಮಧ್ಯೆ ಪ್ರವೇಶಿಸಿದ ಕೆಆರ್ಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಕಾರ್ಮಿಕರು ಮತ್ತು ಸಂಸ್ಥೆಯ ಮಾಲೀಕರೊಡನೆ ಸಮಾಲೋಚನೆ ನಡೆಸಿ ಮೃತಪಟ್ಟ ಸತ್ಯಾರಾಣಿ ಮಕ್ಕಳಿಗೆ ಪರಿಹಾರ ಘೋಷಿಸಿದರು ಹಾಗೂ ಶೀಘ್ರವಾಗಿ ಇಎಸ್ಐ ಹಣವನ್ನು ಕಟ್ಟುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ಕಾರ್ಮಿಕರ ಹಿತ ದೃಷ್ಟಿಯಿಂದ ಕಾರ್ಮಿಕರ ಕಾಯ್ದೆಯನ್ನು ಪ್ರತಿಯೊಂದು ಕೈಗಾರಿಗಳು ಸಮರ್ಪಕವಾಗಿ ಅನುಸರಿಸಬೇಕೆಂಬ ಕಾಯ್ದೆ ಇದ್ದರು. ಕಲರ್ ಲೈನ್ಸ್ ಕಾರ್ಖನೆಯ ಕಾರ್ಮಿಕರ ವೇತನದಲ್ಲಿ ಪಿಎಫ್, ಇಎಸ್ಐ ಕಡಿತಗೊಳಿಸಿದರು ಇಲಾಖೆಗಳಿಗೆ ಪಾವತಿಸದೆ, ಉದ್ಯೋಗಿಗಳ ಜೀವನದ ಜೊತೆ ಆಟವಾಡುತ್ತಿದೆ. ಅಲ್ಲದೆ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಇಲ್ಲ ಸಲ್ಲದ ಕಾರಣ ನೀಡಿ ಕೆಲಸದಿಂದ ತೆಗೆಯುವ ಮೂಲಕ ಅವರ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here