ಗಿಡಗಳನ್ನು ಬೆಳೆಸಿ ರೈತರಿಗೆ ವಿತರಣೆ

0
158

ತುಮಕೂರು/ ಕೊರಟಗೆರೆ: ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿದ ಜಾತಿಯ ಎರಡು ಲಕ್ಷ ಐವತ್ತು ಸಾವಿರ ವಿವಿಧ ತಳಿಯ ಗಿಡಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡುವುದಾಗಿ ತಾಲ್ಲೂಕು ಅರಣ್ಯಾಧಿಕಾರಿ ಚಿನ್ನಪ್ಪ ವಾಹಿನಿಗೆ ತಿಳಿಸಿದ್ದಾರೆ.
ರಸ್ತೆ ಬದಿ ಈಗಾಗಲೆ ಮುಂಗಾರು ಮಳೆ ಕೈಕೊಟ್ಟಿದ್ದರೂ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಸರಬರಾಜು ಮಾಡುವ ಮೂಲಕ ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ.
ವರ್ಷ ಪ್ರತಿ ಪ್ರತಿ ಗಿಡ ಗಿಡ ಬೆಳೆಸುವ ರೈತರಿಗೆ ಗಿಡವೊಂದಕ್ಕೆ ನೂರು ರೂ ಸಹಾಯ ದನ ನೀಡುವ ಮೂಲಕ ಪ್ರೋತ್ಸಾಹ ನೀಡುವ ಗುರಿ ಹಮ್ಮಿಕೊಂಡಿದೆ ಎಂದಿದ್ದಾರೆ.
ನೀಲಗಿರಿ ಸುಬಾಬುಲ್ ಸವೆ೯ ಗಿಡ ಹೊರತುಪಡಿಸಿ ಉಳಿದೆಲ್ಲ ಅಂದರೆ ಮಾವು, ಬೇವು, ಹೊಂಗೆ ,ಹೆಬ್ಬೇವು, ಹುಣಸೆ, ನುಗ್ಗೆ , ಟೀಕ್ ಸೇರಿದಂತೆ ಹಲವಾರು ಜಾತಿಯ ಗಿಡಗಳನ್ನು ಬೆಳೆಸಲಾಗಿದೆ ರೈತರು ಮಳೆಬಂದ ತಕ್ಷಣ ಇಲಾಖೆಯ ವತಿಯಿಂದ ನೀಡುವ ಗಿಡಗಳನ್ನು ಬೆಳೆಸಲು ಮುಂದೆ ಬರುವಂತೆ ಕರೆ ನೀಡಿದ್ದಾರೆ.
ಈಗಾಗಲೆ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕಿನಲ್ಲಿ ಬೀಜದುಂಡೆಯ ಕಾಯ೯ಕ್ರಮ ಯಶಸ್ವಿಯಾಗಿ ರೈತರು ಸೇರಿದಂತೆ ಶಾಲ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ.ಸಕಾ೯ರ ದ ಜೊತೆಗೆ ಮಠಗಳು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಬೀಜದುಂಡೆ ಅಭಿಯಾನ ಕಾರ್ಯಕ್ರಮ ಕಾಯ೯ಕ್ರಮ ಜನ ಬೆಂಬಲ ದೊರೆತಿದೆ ಎಂದು ಹೇಳಿದ್ದರೆ.

LEAVE A REPLY

Please enter your comment!
Please enter your name here