ಗಿಡನೆಡುವ ಕಾರ್ಯಕ್ರಮ..

0
148

ಬೆಂಗಳೂರು/ಹೊಸಕೋಟೆ:- ಹೊಸಕೋಟೆಯ ತಿರುಮಶೆಟ್ಟಹಳ್ಳಿಯ ಸೌಖ್ಯ ರಸ್ತೆಯ ಹಿಂಭಾಗದಲ್ಲಿನ ಸರ್ಕಾರಿ ಜಮೀನಿನಲ್ಲಿ ಮಿಡಿತ ಫೌಂಡೇಷನ್ ಮತ್ತು ಮಹದೇವಪುರ ಕ್ಷೇತ್ರದ ಬಿಜೆಪಿ ಮುಖಂಡ ಅನಂತರಾಮಯ್ಯನವರು 501 ಸಸಿಗಳನ್ನು ನೆಡುವ ಕಾರ್ಯದಲ್ಲಿ ತೊಡಗುವ ಮೂಲಕ ನಗರೀಕರಣಕ್ಕೆ ಹಾನಿಗೊಳ್ಳುತ್ತಿರುವ ಪರಿಸರದ ರಕ್ಷಣೆಗೆ ಟೊಂಕು ಕಟ್ಟಿ ನಿಂತಿದ್ದಾರೆ. ಸೌಖ್ಯ ರಸ್ತೆ ಬಳಿಯ ಅಂಜನಾದ್ರಿ ಎಸ್ಟೇಸ್ ಹಿಂಭಾಗದಲ್ಲಿನ ಸರ್ಕಾರಿ ಪ್ರದೇಶದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಬೆಂಗಳೂರು ನಗರ ಆರ್ಥಿಕ ಚಟುವಟಿಕೆಗಳು ಹೆಚ್ಚಾದಂತೆ, ಉದ್ಯಾನ ನಗರಿಯಿಂದ ಸಿಮೆಂಟ್ ಕಟ್ಟಡಗಳ ನಗರವಾಗಿ ಮಾರ್ಪಟ್ಟಿದೆ, ಮಾನವನ ನಿರಂತರ ಚಟುವಟಿಕೆ ಗಳಿಗೆ ನಾಶವಾಗುತ್ತಿರುವ ಪರಿಸರವನ್ನು ಕೆಲ ಸ್ವಯಂ ಸೇವಕರು ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದೀಪಾವಳಿ ಆಚರಿಸಿರುವ ನಾವು ಪಟಾಕಿಯನ್ನೂ ಸಹಿತ ಎತೇಚ್ಚ ಪ್ರಮಾಣ ದಲ್ಲಿ ಬಳಸಿ ಪರಿಸರ ಹಾಳು ಮಾಡಿದ್ದೇವೆ ಈ ಬಗೆಯ ನಿರ್ಲಕ್ಷ್ಯ ಭಾವ ಮುಂದುವರೆದರೆ ಪರಿಸರವನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಲಿದೆ, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಸಿ ನೆಡುತ್ತಾ ಪರಿಸರ ರಕ್ಷಣೆಯಲ್ಲಿ ತೊಡಗಬೇಕಿದೆ ಎಂದು ಬಿಜೆಪಿ ಮುಖಂಡ ಅನಂತರಾಮಯ್ಯ ತಿಳಿಸಿದರು.

LEAVE A REPLY

Please enter your comment!
Please enter your name here