ಗಿಡಮರಗಳಿಗೆ ನೀರುಣಿಸಿ ಪರಿಸರ ಉಳಿಸಿ

0
257

ಚಿಕ್ಕಬಳ್ಳಾಪುರ/ ಚಿಂತಾಮಣಿ: ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಸಿಂಹ ಸೇನೆ) ಸಂಘಟನೆ ವತಿಯಿಂದ ಗಿಡಗಳಿಗೆ ನೀರು ಹಾಕುವ ಕಾರ್ಯ ಕ್ರಮ.ಚಿಂತಾಮಣಿ ನಗರದ ಪಾಲಟೆಕ್ನಿಕ್ ಮೈಧಾನ ದಲ್ಲಿ ಟ್ಯಾಂಕರ್ ಗಳಿಂದ ಗಿಡಗಳಿಗೆ ನೀರನ್ನು ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ಅಧ್ಯಕ್ಷ: ಕೃಷ್ಣಾ ಜೀ ರಾವ್ ಮಾತನಾಡುತ್ತಾ ಬೇಸಿಗೆಯಲ್ಲಿ ಮಳೆ ಇಲ್ಲದೆ ಗಿಡಗಳು ಒಣಗುತ್ತಿವೆ,ಪರಿಸರ ಹಾಲಾಗುತ್ತಿದೆ ಗಿಡಮರ ಒಣಗಿ ಪಶುಪಕ್ಷಿಗಳಿಗೆ ಆಸರೆ,ಆಹಾರ ಇಲ್ಲದಂತಾಗಿದೆ ಇದಕ್ಕಾಗಿ ಕ ರ ವೇ (ಸಿಂಹ ಸೇನೆ) ವತಿಯಿಂದ ಗಿಡಗಳಿಗೆ ನೀರು ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಒಣಗುತ್ತಿರುವ ಗಿಡಮರಗಳಿಗೆ ನೀರುಣಿಸಿ ಪರಿಸರ ಉಳಿಸಿ ಎಂದು ಮನವಿ ಮಾಡಿದರು. ಪರಿಸರ ರಕ್ಷಣೆಗೆ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದ ಅವರು ಸಂಘಟನೆಯ ರಾಜ್ಯಾಧ್ಯಕ್ಷರಾದ :ಜಯ ದೇವ ಪ್ರಸನ್ನ ರವರ ಸಲಹೆಯ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರು ಮತ್ತು ಪರಿಸರ ಪ್ರೇಮಿಗಳು ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here