ಗಿನ್ನಿಸ್ ವರ್ಲ್ಡ್ ರೆಕಾರ್ಡ್…!

0
472

ಬಳ್ಳಾರಿ:ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಪರ್ಧೆ-ಬಿಸಿಲೂರ ಪೋರಿಯರ ಸಾಧನೆ-ಸೂರ್ಯಕಲಾ ಡ್ಯಾನ್ಸ್ ಅಕಾಡೆಮಿ ಸಾಥ್-ರೂಪಾಲಿಕಾ ಮತ್ತು ಕೋಮಾಲಿಕಾ ರ ಸಾಧನೆ-ಡ್ಯಾನ್ಸ್ ಮಾಸ್ಟರ್ ಕೆ.ಸಿ.ಅಭಿಷೇಕ್ ಗೆ ಖುಷಿಯ ಧಮಾಕಾ.

ಹೆಣ್ಣು ಮಕ್ಳು ಹುಟ್ಟಿದರೆ ಸಾಮಾನ್ಯವಾಗಿ ಮೂಗು ಮುರಿಯುವರೇ ಹೆಚ್ಚು. ಹೆಣ್ಣು ಹುಟ್ಟಿತೆಂದರೆ ಅದು ಕುಟುಂಬದ ಹುಣ್ಣು ಅಂತಾನೇ ಹಲವು ಪೋಷಕರು ಭಾವಿಸ್ತಾರೆ. ಆದರೆ ಬಳ್ಳಾರಿಯ ಟಿ.ಚಂದ್ರಶೇಖರ್ ಮತ್ತು ಪುಷ್ಪಲತಾ ದಂಪತಿಗಳು ಇದಕ್ಕೆ ಹೊರತಾಗಿದ್ದು, ತಮ್ಮ ಎರಡು ಹೆಣ್ಣು ಮಕ್ಕಳಿಗೆ ಉತ್ತಮ‌ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಾಂಸ್ಕೃತಿಕ ಅಭಿರುಚಿ ಬೆಳೆಸುವ ಮೂಲಕ ಗಿನ್ನಿಸ್ ದಾಖಲೆಯ ಸ್ಪರ್ಧೆಗೂ ತಮ್ಮ ಮಕ್ಕಳನ್ನು ಅಣಿಗೊಳಿಸಿದ್ದಾರೆ. ಅಂತಹ ಮಕ್ಳು ಯಾರು? ಅನ್ನೋದನ್ನ ನಾವೀಗ ಪರಿಚಯಿಸ್ತೀವಿ.

ಅಬ್ಬಬ್ಬಾ….!

ನೋಡಿದ್ರಲ್ಲಾ ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟೊಂದು ಪ್ರಶಸ್ತಿ ಫಲಕಗಳನ್ನು….! ಈ ಮಕ್ಳು ನಿಜಕ್ಕೂ ಅಸಾಮಾನ್ಯ ಕಣ್ರಿ. ಇವ್ರ ಹೆಸ್ರು ರೂಪಾಲಿಕಾ ಮತ್ತು ಕೋಮಾಲಿಕಾ ಅಂತ. ರೂಪಾಲಿಕಾ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಾ ಇದ್ರೆ, ಕೋಮಾಲಿಕಾ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವ್ರು ಕೇವಲ ಓದಿನಲ್ಲಷ್ಟೇ ಚುತುರತೆ ಹೊಂದಿಲ್ಲ. ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲ, 2014 ರಲ್ಲಿ ಹೈದರಾಬಾದ್ ನಲ್ಲಿ ನಡೆದ ಗಿನ್ನಿಸ್ ದಾಖಲೆಯ *ಮಹಾಬೃಂದ ನಾಟ್ಯಂ* ಕೂಚಿಪುಡಿ ನೃತ್ಯ ಪ್ರದರ್ಶಿಸುವ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದರಿಂದ ತಮಗೆ ಖುಷಿ ಆಗಿದೆ ಅನ್ನುತ್ತಾರೆ ಸೂರ್ಯಕಲಾ ಡ್ಯಾನ್ಸ್ ಟ್ರಸ್ಟ್ ನ ಸಂಸ್ಥಾಪಕ ಕೆ.ಸಿ.ಅಭಿಷೇಕ್.

ಶಾಸ್ತ್ರೀಯ ನೃತ್ಯ, ಭರತ ನಾಟ್ಯ, ಜಾನಪ ನೃತ್ಯ, ಸಿನೇಮಾ ನೃತ್ಯ…. ಹೀಗೆ ಯಾವುದೇ ಪ್ರಾಕಾರಗಳಲ್ಲಿ ಇವರನ್ನು ಸ್ಪರ್ಧೆಗೆ ಅಣಿಗೊಳಿಸಿದರೆ ಪ್ರಶಸ್ತಿ-ಪುರಸ್ಕಾರಗಳು ಸುಲಭವಾಗಿ ಈ ಪೋರಿಯರಿಗೆ ಸುಲಭವಾಗಿ ಒಲಿಯುತ್ತವೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧೆಡೆ ಆಯಾ ಸರ್ಕಾರಗಳು ಆಯೋಜಿಸುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಿಸಿಲ ನಾಡಿಗೆ ಕೀರ್ತಿ ತಂದಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ಅಂದ್ರೆ ತಮ್ಮ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹ ಕಾರಣ ಅಂತ ಹೇಳ್ತಾರೆ ಪೋರಿ ಟಿ.ಸಾಯಿ ಕೋಮಲಿಕಾ.
ಒಟ್ನಲ್ಲಿ, ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯಲ್ಲೂ ತಮ್ಮ ಅಸಾಮಾನ್ಯ ಪ್ರತಿಭೆ ಹೊಂದಿರುವ ಈ ಕಿಶೋರಿಯರು ಈಗಾಗಲೇ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆನೆಗೊಂದಿ ಉತ್ಸವ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ನಡೆವ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದಾರೆ. ಆ ಮೂಲಕ ತಮ್ಮಲ್ಲಿನ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪ್ರೌಢಿಮೆ ಮೆರೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here