ಆತ್ಮಹತ್ಯೆ ಪ್ರಯತ್ನ, ಬಿಇಓ ಕಿರುಕುಳ ಆರೋಪ..

0
296

ವಿಜಯಪುರ- ಸಿಂದಗಿ :ಗುತ್ತಿಗೆ ಆಧಾರದ ನೌಕರನಿಗೆ ಬಿಇಓ ಕಿರುಕುಳ ಆರೋಪ..
ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ವಿಷ ಸೇವಿಸುವ ಮುನ್ನ ಸ್ನೇಹಿತರಿಗೆ ವಾಟ್ಸ್ ಆಪ್ ಚಾಟ್ ಮಾಡಿ ವಿಷಯ ತಿಳಿಸಿದ ನೌಕರ

ಸಿಂದಗಿ ಬಿಇಓ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಮಲೇಗಾರ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ನಿವಾಸಿ ಬಸವರಾಜ್.
ಸಿಂದಗಿ ಬಿಇಓ ಆರೀಫ್ ಬಿರಾದಾರ ಕಿರುಕುಳ ನೀಡುತ್ತಿರುವ ಆರೋಪ. ಮಾನಸಿಕ‌ ಹಿಂಸೆ ನೀಡುತ್ತಿದ್ದಾರೆಂದು ಬಸವರಾಜ್ ಆರೋಪ‌.

ಗುತ್ತಿಗೆ ಆಧಾರದ ಸೇವೆಯಲ್ಲಿ ಮುಂದುವರೆಯಲು ಮರು ಆದೇಶ ತಂದರೂ ಸೇವೆಗೆ ಸೇರಿಸಿಕೊಳ್ಳದ ಬಿಇಓ.ಒಂದು‌ ತಿಂಗಳ ಸಂಬಳ 19,000 ರೂಪಾಯಿ ನೀಡಬೇಕೆಂದು ಬಿಇಓ ಬಿರಾದಾರ್ ಡಿಮ್ಯಾಂಡು ಮಾಡುತ್ತಿದ್ದಾರೆ ಆರೋಪ.

ನನ್ನ ಸಾವಿಗೆ ಸಿಂದಗಿ ಬಿಇಓ. ಆರೀಫ್ ಬಿರಾದಾರ ಕಾರಣವೆಂದು ಚಾಟ್ ಮಾಡಿದ ಬಸವರಾಜ್,ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಸ್ನೇಹಿತರೇ ಎಂದು ಮನವಿ,ನನ್ನ ಸಾವಿಗೆ ನ್ಯಾಯ ಒದಗಿಸಿ ಸ್ನೇಹಿತರೆ ಎಂದು ಮನವಿ ಮಾಡಿಕೊಂಡಿರುವ ಬಸವರಾಜ್

ನಂತರ ವಿಷ ಸೇವಿಸಿದ ಗುತ್ತಿಗೆ ನೌಕರ ಬಸವರಾಜ್ .ವಿಷಯ ತಿಳಿದು ಬಸವರಾಜನನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ನೇಹಿತರು.
ಬಸವರಾಜ್ ಸ್ಥಿತಿ ಗಂಭೀರ

LEAVE A REPLY

Please enter your comment!
Please enter your name here