ಗುದ್ದೋಡು ಘಟನೆಯಲ್ಲಿ ಪೇದೆ ಸಾವು

0
1428

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರತ ಎ.ಎಸ್.ಐ ಎಸ್ ಮುನಿಯಪ್ಪ ಸಾವು.

ಬುಧವಾರ ರಾತ್ರಿ11 ಗಂಟೆಗೆ ಮುನಗನಹಳ್ಳಿ ಯಲ್ಲಿ ಗಂಡ ಹೆಂಡತಿ ಗಲಾಟೆ ಮಾಡಿಕೊಳ್ಳತಿದ್ದಾರೆ ಎಂದು ಗ್ರಾಮಂತರ ಠಾಣೆಗೆ ಕರೆ ಬಂದ ಹಿನ್ನಲೆ ಎಎಸ್ ಐ ಮುನಿಯಪ್ಪ ದ್ವಿಚಕ್ರ ವಾಹನದಲ್ಲಿ ಮಾಳಪ್ಪಲ್ಲಿ ಮಾರ್ಗದಿಂದ ಹೋಗುತ್ತಿದ್ದ ವೇಳೆ ಕಲ್ಲಹಳ್ಳಿ ಹತ್ತಿರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡದಿದೆ‌.

ಇನ್ನೊಬ್ಬ ಪೊಲೀಸರು ಅದೇ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ನೋಡಿ ಮೃತಪಟ್ಟ ಎ ಎಸ್ ಐ ಮುನಿಯಪ್ಪರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸ್ ಇಲಾಖೆಯಲ್ಲಿ ಹಿರಿಯ ಆಧಿಕಾರಿಗಳು , ಆರಕ್ಷಕ ವೃತ ನಿರೀಕ್ಷಕರು ಮತ್ತು ಉಪ ನಿರೀಕ್ಷಕರಿಗೆ ಬಿಟ್ಟರೆ ವಾಹನಗಳ ಸೌಲಭ್ಯವಿಲ್ಲದಾಗಿವೆ. ಯಾವುದೇ ಒಂದು ಪ್ರಕರಣಕ್ಕೆ ಹೋಗುವ ಸಂದರ್ಭದಲ್ಲಿ ಮಳೆ, ಚಳಿ ಉಇದ್ದರೂ ದ್ವಿಚಕ್ರ ವಾಹನದಲ್ಲೇ ಹೋಗುವ ಪರಿಸ್ಥಿತಿ ಬಂದಿದೆ .

ಸುದ್ದಿ ತಿಳಿದು ತಕ್ಷಣ ಡಿವೈಎಸ್ಪಿ ನಾಗೇಶ್ ರವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ .

LEAVE A REPLY

Please enter your comment!
Please enter your name here