ಗುರುವಂದನಾ ಸಮಾರಂಭ…

0
172

ಮಂಡ್ಯ/ಮಳವಳ್ಳಿ: ಶಾಂತಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರೋ. ಪುಟ್ಟಸ್ವಾಮಿಯರವರ ಅಭಿಮಾನಿಬಳಗ ವತಿಯಿಂದ ಶಾಂತಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೋ. ಪುಟ್ಟಸ್ವಾಮಿಯವರಿಗೆ ಗುರುವಂದನಾ ಸಮಾರಂಭ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಆವರಣದಲ್ಲಿ ನಡೆಸಲಾಯಿತು. ಕಾರ್ಯ ಕ್ರಮವನ್ನು ಬೆಳಗಾಂ ರಾಣಿ ಚೆನ್ನಮ್ಮ. ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೋ .ಬಿ ಆರ್ ಅನಂತನ್ ಉದ್ಘಾಟಿಸಿದರು. ನಂತರ ಮಾತನಾಡಿ ಒಳ್ಳೆಯ ಗುರುಗಳನ್ನು ಶಿಷ್ಯರು ಎಂದೂ ಮರೆಯುವುದಿಲ್ಲ . ಅದಕ್ಕಾಗಿ ಗುರು ಒಳ್ಳೆಯರಾಗಿ ಹೆಸರು ಮಾಡಬೇಕು. ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿಶಿಕ್ಷಣ ಸಂಸ್ಥೆ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ನಾಗಮಣಿನಾಗೇಗೌಡ ವಹಿಸಿದ್ದರು. ಆಧಿಚುಂಚನಗಿರಿ ಮಹಾಸಂಸ್ಥಾನ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥಸ್ವಾಮೀಜೀ ದಿವ್ಯಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೋ.ನಾಗರಾಜೇಗೌಡರು, ರಾಮು, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಹೆಚ್ ಕೆಂಪಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು. ಇದೇ ಸಂದರ್ಭದಲ್ಲಿ ನಿವೃತರಾದ ಪ್ರಾಂಶುಪಾಲ ಪ್ರೋ .ಪುಟ್ಟಸ್ವಾಮಿರವರಿಗೆ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು , ಹಳೆಯ ವಿದ್ಯಾರ್ಥಿಗಳು ಸನ್ಮಾನಿಸುವ ಮೂಲಕ ಗುರುವಂದನಾ ಯನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here