ಗೊಂದಲ ಸೃಷ್ಠಿಸುತ್ತಿದ್ದಾರಾ ಮಾಜಿ ಶಾಸಕರು?

0
132

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಶಾಸಕ ಜೆಕೆ ಕೃಷ್ಣಾ ರೆಡ್ಡಿ ರವರ ನಿವಾಸದಲ್ಲಿ ನಗರ ಸಭಾ ಸದಸ್ಯರಿಂದ ಪತ್ರಿಕಾಗೋಷ್ಠಿ,

ನಗರ ಸಭಾ ಸದಸ್ಯ ಆರ್.ಪ್ರಕಾಶ್ ಮಾತನಾಡಿ ಮಾಜಿ ಶಾಸಕರ ಬಣಕ್ಕೆ ಈ ವಾರದಿಂದ ನಡೆಯುತ್ತಿರುವ ಸೇರ್ಪಡೆ ಕಾರ್ಯಕ್ರಮಗಳಲ್ಲಿ ತಮ್ಮ ಪಕ್ಷದವರನ್ನೇ ಸೇರಿಸಿಕೊಂಡಿದ್ದಾರೆ.

ಕಾಟಮಾಚನಹಳ್ಳಿ ದೇವರೆಡ್ಡಿ ಕಾಂಗ್ರೆಸ್ ಪಕ್ಷದವರೇ ಜೆಡಿಎಸ್ ಪಕ್ಷ ದವರಲ್ಲ ,ವಾಣಿ ಕೃಷ್ಣಾರೆಡ್ಡಿ ಜೊತೆ ಯಲ್ಲಿರುವ ದೇವರೆಡ್ಡಿ, ಈಗ ಮಾಜಿ ಶಾಸಕರ ಹತ್ತಿರ ಸೇರಿದ್ದಾರೆ ಜೆಕೆ ಕೃಷ್ಣಾರೆಡ್ಡಿ ಶಾಸಕರಾದಮೇಲೆ ದೇವರೆಡ್ಡಿ ಜೆಡಿಎಸ್ ಪಕ್ಷಕ್ಕೆ ಯಾವತ್ತೂ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು ,

ಕೇವಲ ಮೂರು ನಾಲ್ಕು ಜನರ ಸೇರ್ಪಡೆಗೆ ಅವರ ಕಾರ್ಯಕರ್ತರು ಬೈಕ್ ರ್ಯಾಲಿ ಮುಖಾಂತರ ಬರ್ತಾರೆ.ಜೆಡಿಎಸ್ ಪಕ್ಷದ ಕೆಲವು ಕಾರ್ಯಕರ್ತರು ಹೋಗಿದ್ದಾರೆ ಅವರಿಂದ ಪಕ್ಷಕ್ಕೇನೂ ನಷ್ಟವಿಲ್ಲ ಎಂದರು.
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಸುಧಾಕರ್ ಸೋಲುವ ಭೀತಿಯಿಂದಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರು ಸೇರ್ಪಡೆ ಯಾಗಿದ್ದಾರೆಂದು ಜನರಿಗೆ ಸುಳ್ಳು ಮಾಹಿತಿ ನೀಡಿ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆಂದು ನಗರ ಸಭೆ ಜೆಡಿಎಸ್ ಸದಸ್ಯರು ಆರೋಪಿಸಿದ್ದಾರೆ.

ಮಾಜಿ ಶಾಸಕರು ಪದೇ ಪದೇ ಅಭಿವೃದ್ಧಿ ಬಗ್ಗೆ ಮಾತನಾಡುವ ಬದಲು ಆರ್ ಟಿಐ ಮೊಲಕ ಮಾಹಿತಿ ಪಡೆದು ಕೊಂಡು ತಿಳಿದುಕೊಳ್ಳಿ ಯಾವ ಯಾವ ಹಳ್ಳಿ ಯಲ್ಲಿಎಷ್ಟು ಕೆಲಸ ಆಗಿದೆ ಎಂದು ನಗರ ಸಭಾ ಸದಸ್ಯರಾದ ಜೆಸಿಬಿ ನಟರಾಜ್ ಹೆಳಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರು ಸಾದಪ್ಪ, ಶ್ರೀ ರಾಮಪ್ಪ,ಮಹಮ್ಮದ್ ಷಫೀಕ್ ಜಿಯಾ ಉಲ್ಲಾ ರೇಹಮಾನ್, ಪ್ರಕಾಶ್ ,ಜೆ ಸಿಗೊಂದಲಟರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here