ಗೊಲ್ಲರ ಪ್ರಾಧಿಕಾರಕ್ಕಾಗಿ ಒತ್ತಾಯ..

0
399

ಚಿಕ್ಕಬಳ್ಳಾಪುರ:ಕರ್ನಾಟಕ ರಾಜ್ಯದಲ್ಲಿ ಗೊಲ್ಲರು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯು ಇದ್ದಾರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸರಿ ಸುಮಾರು ಮುವತ್ತೈದು ಸಾವಿರ ಜನಸಂಖ್ಯೆ ಇದ್ದಾರೆ ಆದ್ದರಿಂದ ನಾವೆಲ್ಲರೂ ಸಹ ರಾಜಕೀಯವಾಗಿ ಆರ್ಥಿಕವಾಗಿ.ಮತ್ತು ಸಾಮಾಜಿಕವಾಗಿ ಮುಂಚೂಣೆಗೆ ಬರಲು ಅವಕಾಶ ಸಿಗಲಿಲ್ಲ ಆದ್ದರಿಂದ ಭಾವಗಳು ಈ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಗೊಲ್ಲರ ಅಭಿವೃದ್ಧಿ ಪ್ರಾಧಿಕಾರದ ಅಸ್ತಿತ್ವಕ್ಕೆ ಬಂದರೆ ಮಾತ್ರ ಗೊಲ್ಲರ. ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಗೊಲ್ಲರ ಯುವ ವೇದಿಕೆಯ ರಾಜ್ಯಾದ್ಯಕ್ಷರಾದ ಗಂಗಾಧರ ಯಾದವ ರವರು ಒತ್ತಾಯಿಸಿದರು. ಹಾಗು ಮುಂದಿನ ದಿನಗಳಲ್ಲಿ ನಮ್ಮ ಜನಾಂಗದವರು ರಾಜಕೀಯವಾಗಿ ವಂಚಿತರಾಗಿದ್ದಾರೆ ಹಾಗೂ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಜನಾಂಗದವರಿಗೆ ಸ್ಪರ್ಧಿಸಲು ಎಲ್ಲಾ ಪಕ್ಷದವರು ಅವಕಾಶ ನೀಡಬೇಕು ಇಲ್ಲವಾದಲ್ಲಿ ನಮ್ಮ ಯುವ ವೇದಿಕೆಯ ವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇವೆಂದು ರಾಜ್ಯ ಕಾರ್ಯಾದ್ಯಕ್ಷರಾದ ಸುಧಾಕರ್ ರವರು ತಿಳಿಸಿದರು. ಮತ್ತು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹ ಪದಾಧಿಕಾರಿಗಳನ್ನ ಆಯ್ಕೆ ಮಾಡಿ ಜನಾಂಗದವರನ್ನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ವೇದಿಕೆಯಲ್ಲಿ ಎಲ್ಲಾ ಪದಾದಿಕಾರಿಗಳಾದ ಮುನಿರಾಜು ಮಂಜುನಾಥ ಮತ್ತು ಕಾರ್ಯ ಕರ್ತರು ಹಾಜರಿದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here