ಗೋರಿಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು

0
216

ಬೆಂಗಳೂರು/ಮಹದೇವಪುರ:-ರುಧ್ರಭೂಮಿ ಯಲ್ಲಿನ 20ಕ್ಕೂ ಹೆಚ್ಚು ಗೋರಿಗಳನ್ನು ವಿಕೃತ ಮನಸ್ಸಿನ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿಯಲ್ಲಿ ಜರುಗಿದೆ.
ಮಹದೇವಪುರ ಕ್ಷೇತ್ರದ ಹೂಡಿಯಲ್ಲಿರುವ ಹಿಂದುಗಳ ರುಧ್ರಭೂಮಿಯಲ್ಲಿ ಭಾನುವಾರ ರಾತ್ರಿ ವಿಕೃತ ಮನಸ್ಸಿನ ದುಷ್ಕಮರ್ಿಗಳು ಸಮಾಧಿಗಳನ್ನು ಧ್ವಂಸಗೊಳಿಸಿದ್ದಾರೆ. ಸೋಮವಾರ ಬೆಳ್ಳಿಗೆ ವಿಷಯ ತಿಳಿದ ಹೂಡಿ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕಿಡಿಗೇಡಿಗಳನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಷ್ಟು ದಿನ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳ ಮತ್ತು ಕಾರ್ಗಳ ಗಾಜುಗಳನ್ನೊಡೆದು ಪುಂಡಾಟಿಕೆ ಮೆರೆಯುತ್ತಿದ್ದರು. ಆದರೆ ಈಗ  ಸಮಾಧಿಗಳನ್ನು ಧ್ವಂಸಗೊಳಿಸುವ ವಿಕೃತಿಗೆ ಮುಂದಾಗಿರುವುದರಿಂದ ಸಾರ್ವಜನಿಕರು ಆತಂಕಕ್ಕೋಳಗಾಗಿದ್ದಾರೆ.
ಮನುಷ್ಯರು ತಾವು ಸತ್ತ ನಂತರ ಅವರನ್ನು ದೈವ ಭಾವನೆಯೊಂದಿಗೆ ಕಂಡು ಅವರ ನೆನಪು ಉಳಿಯಲು ಸಮಾಧಿ ನಿರ್ಮಿಸಿ ಪೂಜಿಸುವ ಕಾರ್ಯವನ್ನು ಎಲ್ಲಾ ಧರ್ಮರಾಯರು ಮಾಡುತ್ತಾ ಬಂದಿದ್ದಾರೆ,
ರುಧ್ರ ಭೂಮಿಯಲ್ಲಿ ಗೋರಿಗಳನ್ನು ದ್ವಂಸ ಗೊಳಿಸಿರುವುದು ಸಮಾಜದಲ್ಲಿ ಶಾಂತಿ ಕೆದಡಲು ಕಾರಣವಾಗಿದೆ. ಇನ್ನೊಂದೆಡೆ ಈ ರುಧ್ರಭೂಮಿ ದಲಿತರಿಗೆ ಸೇರಿದ್ದು, ಎನ್ನಲಾಗಿದ್ದು, ಕೆಲ ಸವರ್ಣೀಯರು ಈ ಕೃತ್ಯ ವೆಸಗಿರಬಹುದೆಂಬುದು ಶಂಕಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪಾಲಿಕೆ ಸದಸ್ಯ ಎ.ಸಿ.ಹರಿಪ್ರಸಾದ್ ಪರಿಶೀಲನೆ ನಡೆಸಿ ಸಮಾಜದಲ್ಲಿ ಶಾಂತಿ ಕದಡುವ ದುರುದ್ದೇಶದಿಂದ ಈ ಕೃತ್ಯ ವೆಸಗಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ಸಮಾಜದ ಹಿತ ದೃಷ್ಟಿಯಿಂದ  ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಬಿಬಿಎಂಪಿ ಯಿಂದ ರುದ್ರ ಭೂಮಿಗೆ ತಡೆಗೋಡೆ ನಿಮರ್ಾಣ, ಸಿ.ಸಿ ಟಿವಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.
ಘಟನೆ ಹಿನ್ನೆಲೆ ಕೆಆರ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here