ಗೌರಿ ಹತ್ಯೆಯನ್ನು ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

0
48

ಬಳ್ಳಾರಿ /ಹೊಸಪೇಟೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ರೈತ ಸಂಘಖಂಡಿಸಿ ಹಂತಕರನ್ನು ಸರ್ಕಾರ ತಕ್ಷಣವೇ ಬಂಧಿಸಬೇಕುಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ ಬಣದಿಂದಶುಕ್ರವಾರ ಪ್ರತಿಭಟನೆ ನಡೆಸಿ ತಹೀಸಲ್ದಾರ್ ಕಚೇರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.

ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ,ಅಲ್ಪಸಂಖ್ಯಾತರ, ದಲಿತರ ಅಸಾಹಯಕ ಮಹಿಳೆಯರ ಮತ್ತುಕೂಲಿ ಕಾರ್ಮಿಕರ ಪರ ಹೋರಾಡುತ್ತಿದ್ದು, ನಕ್ಸಲಿಯರನ್ನುಸಮಾಜದ ಮುಖ್ಯವಾಹಿನಿಗೆ ತರುವುದರಲ್ಲಿ ಅವರು ಪಟ್ಟಶಅರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಒಬ್ಬಽರ ಮಹಿಳೆಯನ್ನು ಹಂತಕರು ಗುಂಡಿಟ್ಟು ಕೊಂದಿರುವುದುಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ,ಇದನ್ನು ರೈತ ಸಂಘಟನೆಗಳು ಖಂಡಿಸುತ್ತವೆ.

ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ಅವರವರ ಅಭಿಪ್ರಾಯವ್ಯಕ್ತಪಡಿಸಲು ಅವಕಾಶವಿದೆ. ಇದನ್ನು ಮೀರಿ ಮಾತನಾಡುವಹಕ್ಕುಗಳಉ ಕೊಲೆಯ ಮೂಲಕ ಹತ್ತಿಕ್ಕುವುದು ಸರಿಯಲ್ಲ.ಹಂತಕರು ವ್ಯಕ್ತಿಯನ್ನು ಕೊಲ್ಲುಬಹುದೇ ವಿನಃ ವಿಚಾರವನ್ನಲ್ಲ.ಅವರನ್ನು ಕೊಂದ ಮತ್ರಕ್ಕೆ ಅವರು ಪ್ರತಿವಾದಿಸುವಚಿಂತನೆಗಳು ಅಂತ್ಯವಾಗುತ್ತವೆಂದು ಹಂತಕರು ಭಆವಿಸಿದ್ದಾರೆ.ಅದು ತಪ್ಪು ತಿಳುವಳಿಕೆ, ವಿಚಾರವಾದಿಗಳ ಹತ್ಯೆ ನಡೆಸಿದರೆಅವರ ವಿಚಾರಗಳಿಗೆ ಇನ್ನಿಷ್ಟು ಬಲಬರುತ್ತದೆ.

ನರೇಂದ್ರ ದಾಬೂಲ್ಕರ್, ಗೋವಿಂದಪಾನ್ಸಾರೆ ಮತ್ತು ಡಾ.ಎಂ. ಎಂ. ಕಲಬುರ್ಗಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನುಹತ್ತಿಕ್ಕಲು ಮಾಡಿದ ಹತ್ಯೆಗಳನ್ನು ಮತ್ತು ಗೌರಿ ಲಂಕೇಶ್ಅವರ ಹತ್ಯೆಗೂ ಸಾಮ್ಯತೆ ಇರುವುದರಿಂದ ಸೈದ್ದಾಂತಿಕನಿಲುವುಗಳ ಭಿನ್ನಾಭಿಪ್ರಾಯವೇ ಕಾರಣವಿರಬಹುದುಚಿಂತನೆಯಾಗಿದೆ. ಅದ್ದರಿಂದ ರಾಜ್ಯ ಸರ್ಕಾರ ಹಿರಿಯಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಎಲ್ಲರಲ್ಲೂಅಘಾತವನ್ನುಂಟು ಮಾಡಿದೆ. ಹಂತಕರನ್ನು ತಕ್ಷಣವೇಬಂಽಸಬೇಕು. ಎಂ. ಎಂ. ಕಲಬುರ್ಗಿಅವರ ಹತ್ಯೆಯಾಗಿಎರಡು ವರ್ಷವಾದರೂ ಕೊಲೆಗಾರರು ಯಾರು ಎಂಬುದುಇನ್ನೂ ಗೊತ್ತಾಗಿಲ್ಲ. ಇದು ನಮ್ಮ ರಾಜ್ಯದ ಪೊಲೀಸ್ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇನ್ನುಮಂದಾದರೂ ಸರ್ಕಾರ ಎಚ್ಚರ ವಹಿಸಬೇಕು.

ಸರ್ಕಾರ ಮತ್ತು  ಪೊಲೀಸ್ ತನಿಖಾ ವ್ಯವಸ್ಥೆ ಬಲಗೊಳಿಸಿ ಡಾ. ಎಂ. ಎಂ. ಕಲಬುರ್ಗಿ ಹಾಗೂ ಪತ್ರಕರ್ತೆಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕರು ಯಾರೇಆಗಿರಲಿ, ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿರಲಿ ಅವರನ್ನುಆದಷ್ಟು ಬೇಗನೆ ಬಂಧಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕುಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ರಾಜ್ಯಪಧಾನ ಕಾರ್ಯದರ್ಶಿ ಕೆ. ಪರುಶುರಾಮಪ್ಪ, ರಾಜ್ಯಉಪಾಧ್ಯಕ್ಷ ಕೆ. ಬಾಬುನಾಯ್ಕ, ಜಿಲ್ಲಾಧ್ಯಕ್ಷ ದೇವರಮನಿಮಹೇಶ್, ಸಂಘದ ಮುಖಂಡರಾದ ಎಂ. ಪ್ರಕಾಶ್, ಕೆ.ಮರೇಶ್, ಜೆ. ಎನ್. ಕಾಳಿದಾಸ, ಎನ್. ವೆಂಕಟೇಶ್,ಜಯಪ್ರಕಾಶ್‌ನಾಯ್ಕ, ಡಿ. ಹನುಮಂತಪ್ಪ, ಎ. ಷಣ್ಮುಖಪ್ಪಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here