ಗ್ರಂಥಗಳ ಬಿಡುಗಡೆ ಸಮಾರಂಭಕ್ಕೆ ಚಾಲನೆ ಕೂಟ್ಟ ಶಾಸಕ.

0
232

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಂ ಎನ್ ರಘು ಇವರ ಸಂಪಾದಕತ್ವದ “”ಏನ್ಸಿಯಂಟ್ ಡೈನಾಸ್ಟೀಸ್ ಇನ್ ಕೋಲಾರ ಡಿಸ್ಟ್ರಿಕ್ಟ್‌ ದೇರ್ ಕಾಂಟ್ರಿಬ್ಯೂಷನ್ಸ್ ಅಂಡ್ ಪರ್ಸ್ಪ ಪೆಕ್ಟೀವ್ಸ್ ಆಫ್ ಟೂರಿಸಂ”” ಮತ್ತು “ಎಕನಾಮಿಕ್,ಪೊಲಿಟಿಕಲ್, ಸೋಶಿಯಲ್ ಅಂಡ್ ಕಲ್ಚರಲ್ ಹಿಸ್ಟರಿ ಆಫ್ ಕರ್ನಾಟಕ” ಎಂಬ ಎರಡು ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಸ್ಥಳೀಯ ಶಾಸಕ ಎಂ ಕೃಷ್ಣಾ ರೆಡ್ಡಿ ರವರು ಚಾಲನೆ ನೀಡಿದರು.

ಪುಸ್ತಕಗಳನ್ನು ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ಕೆ ಆರ್ ನರಸಿಂಹನ್ ಮತ್ತು ಡಾ.ಹೆಚ್ ಜಿ.ನಾರಾಯಣ ಇವರ ಗ್ರಂಥಗಳ ಕುರಿತು ವಿಶ್ಲೇಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಡಾ.ಗವಿಸಿದ್ದಯ್ಯ ,ಡಾ.ಬಿ.ಎಸ್ ಪುಟ್ಟ ಸ್ವಾಮಿ, ಮುದ್ರಣ ಮಾಡಿದ ಸತ್ಯ ಶ್ರೀ ಪ್ರಿಂಟರ್ ಮಾಲೀಕರಾದ ಎಲ್,ಲಿಂಗಪ್ಪ ಮುಖ್ಯ ಅತಿಥಿಗಳಿಗೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ .ರಾಮಕೃಷ್ಣ, ಲೇಖಕರಾದ ಡಾ.ಎಂ.ಎನ್. ರಘು ಐಕ್ಯೂ ಎಸಿ ಸಂಚಾಲಕ ಪ್ರೊ.ಕೆ ಆರ್ ಶಿವಶಂಕರ್ ಪ್ರಸಾದ್, ಪ್ರಾಧ್ಯಾಪಕರು, ನಗರಸಭೆ ಸದಸ್ಯರಾದ ಷಫೀಕ್, ನವೀನ ಕುಮಾರ್ ,ನರೇಶ್ ,ಹಾಗೂ ವಿದ್ಯಾರ್ಥಿಗಳು ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ದಲ್ಲಿ ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here