ಗ್ರಾಮ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ..

0
131

ಚಿಕ್ಕಬಳ್ಳಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಯಿಂದ ಗ್ರಾಮ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಾಗರಿಕ ಪ್ರಜ್ಞೆ ಮತ್ತು ಸ್ವಚ್ಛತಾ ಕಾರ್ಯಕ್ರಮಗಳನ್ನ ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮನೆ ಮನೆಗಳಲ್ಲಿಯೂ ಉತ್ತಮ ರೀತಿಯಲ್ಲಿ ಸ್ವಚ್ಛತೆಯನ್ನ ಕಾಯ್ದು ಕೊಳ್ಳುಬೇಕೆಂಬುದು ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರ ಅಭಿಪ್ರಾಯವಾಗಿರುತ್ತದೆ ಈ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಬಹು ಮುಖ್ಯ ಪಾತ್ರ ವಹಿಸುತ್ತಿದ್ದು. ಶ್ರದ್ಧಾ ಕೇಂದ್ರಗಳ ಆಡಳಿತ ಮಂಡಳಿಗಳು ಅರ್ಚಕರು ಈ ಬಗ್ಗೆ ಅರಿವು ಮೂಡಿಸಬೇಕು ಮತ್ತು ಸ್ವಚ್ಛತೆಯನ್ನ ಅಭ್ಯಾಸ ಮಾಡಿದಲ್ಲಿ ಜನ ಸಮುದಾಯ ಇದನ್ನ ಅನುಸರಿಸುವರೆಂಬ ಅಭಿಪ್ರಾಯ ಪೂಜ್ಯರದ್ದಾಗಿರುತ್ತದೆ. ಇದರಂತೆ ಕಳೆದ ವರ್ಷ ಎರಡು ಬಾರಿ ಜನವರಿ 13 ರಂದು ಮತ್ತು ಆಗಸ್ಟ್ 15 ರಂದು ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನ ಕೈಗೊಳ್ಳಲಾಗಿತ್ತು.ಇದರಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ದೇವಸ್ಥಾನದ ಆವರಣ ಮಸೀದಿ ಚರ್ಚ್ ಜೈನ ಮಂದಿರಗಳ ಸುತ್ತ ಮುತ್ತಲಿನ ಸ್ವಚ್ಛತೆಯನ್ನಕೈಗೊಳ್ಳಬಹುದಾಗಿದೆ.ಮತ್ತು ವಿಶೇಷವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೆಲವು ಆಯ್ದ ಕೆರೆಗಳಲ್ಲಿ ನಾಲ್ಕು ಕೆರೆಗಳನ್ನ ಹೂಳೆತ್ತುವ ಕೆಲಸ ಈ ಯೋಜನೆಯಿಂದ ಮಾಡಲಾಗಿದೆ ಹಾಗು ಜಿಲ್ಲೆಯಲ್ಲಿ ಕೆಲವು ಸಾಮಾಜಿಕ ಯೋಜನೆಗಳನ್ನ ಕೈಗೊಂಡಿದೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸವುಡ್ಯ ಗ್ರಾಮದ ಬಸವೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಒಂದು ಲಕ್ಷ ಅನುದಾನವನ್ನು ನೀಡಲಾಯಿತು. ಹಾಗೆಯೇ ಕಾಡುದಿಬ್ಬೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನೀರ್ಮಾಣಕ್ಕೆ 75000- 00 ರೂಗಳನ್ನ ದೇಣಿಗೆಯಾಗಿ ನೀಡಲಾಯಿತು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರಾದ ವಸಂತ್ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ವೇದಿಕೆಯಲ್ಲಿ ಯೋಜನಾದಿಕಾರಿಗಳಾದ ರಮೇಶ ಮೇಲ್ವಿಚಾರಕರಾದ ಸುನೀತಾ ವಿಜಯಕುಮಾರ್ ಉಪಸ್ಥಿತರಿದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here