ಗ್ರಾ. ಪಂ ಅಧ್ಯಕ್ಷ ಹಾಗೂ ಪಿ ಡಿ ಓ ಮೇಲೆ ಆರೋಪಸಿ ಪ್ರತಿಭಟನೆ….

0
189

ವಿಜಯಪುರ/ಸಿಂದಗಿ:ತಾಲೂಕಿನ ದೇವರನಾವದಗಿ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆ, ವಸತಿ ಯೋಜನೆ, ಶೌಚಾಲಯ, ಕುಡಿಯುವ ನೀರು, ಬಿಡುಗಡೆಯಾದ ಅನುದಾನಗಳಲ್ಲಿ ಗ್ರಾ. ಪಂ ಅಧ್ಯಕ್ಷ ಹಾಗೂ ಪಿಡಿಯೋ ಶಾಮೀಲಾಗಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ  ತಾ.ಪಂ. ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಕುಮಸಗಿ ಘಟಕದ ಕಾರ್ಯಕರ್ತರು  ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು. ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ದೇವರನಾವದಗಿ ಗ್ರಾಮ ಪಂಚಾಯಿತಿಯಲ್ಲಿ 2016 -17 ‍‌‌‌‍ನೇ ಸಾಲಿನಲ್ಲಿ 14 ನೇ ಹಣಕಾಸು ಬಿಡುಗಡೆಯಾದ 60 ಲಕ್ಷ ಅವ್ಯವಹಾರವಾಗಿದೆ, ಹಣವನ್ನು ಸಮರ್ಪಕವಾಗಿ ಬಳಸದೇ ಗ್ರಾ. ಪಂ ಅಧ್ಯಕ್ಷ ಹಾಗೂ ಪಿಡಿಯೋ ಅವರುಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ ಎಂದು ಗ್ರಾಮಸ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಪ.ಜಾತಿ, ಪಂಗಡದವರಿಗೆ ಮಂಜೂರಾದ ವಸತಿ ಮನೆಗಳನ್ನು ಗ್ರಾಮ ಸಭೆ, ವಾರ್ಡ್‌ಗಳಲ್ಲಿ ಚರ್ಚೆ ಮಾಡಿ, ಫಲಾನುಭವಿಗಳ ಆಯ್ಕೆ ಮಾಡದೇ ಸದಸ್ಯರು ಸೂಚಿಸಿದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ವಂಚನೆಯಾಗಿದೆ. ಶೌಚಾಲಯ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿ ಮಾಡದೆ ಬೋಗಸ್ ಬಿಲ್ಲ ಹಣ ಲೂಟಿ ಮಾಡಿದ್ದಾರೆ, ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾ ಕಾಯ೯ನಿವಾ೯ಧಿಕಾರಿ ಭಾರತಿ ಚಲುವಯ್ಯ ಅವರಿಗೆ ಮನವಿ ಸಲ್ಲಿಸಿದರು. .

ಪ್ರತಿಭಟನೆಯಲ್ಲಿ ಶಿವಶಂಕರಗೌಡ ಬಿರಾದಾರ, ಸುರೇಶ ಮಳ್ಳಿ, ಲಕ್ಷ್ಮೀಕಾಂತ ಕೊಳಕೂರ, ಯಶವಂತರಾಯ ಬಿರಾದಾರ, ಶಾಂತಪ್ಪಗೌಡ ಪಾಟೀಲ, ಸಿದ್ದು ಮಾರದ, ಸಂತೋಷ ಕಳ್ಳೋಳ್ಳಿ, ಕುಪ್ಪಣ್ಣ ಬಿರಾದಾರ ಹಾಗೂ ಕುಮಸಗಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.

ಬೈಟ್: ಭಾರತಿ ಚಲುವಯ್ಯ.
ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಸಿಂದಗಿ..

LEAVE A REPLY

Please enter your comment!
Please enter your name here