ಗ್ರಾ.ಪಂ ನಲ್ಲಿ ಹಾರದ ಧ್ವಜ,ಪಿಡಿಓ ನಿರ್ಲಕ್ಷ್ಯ

0
96

ರಾಯಚೂರು.ಗ್ರಾ.ಪಂನಲ್ಲಿ ಪಿಡಿಓ ಧ್ವಜಾರೋಹಣ ನೆರೆವೇರಿಸದೆ ಅಗೌರವ ಸೂಚಿಸಿ ನಿರ್ಲಕ್ಷ್ಯ ವಹಿಸಿದ್ದು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ಸರ್ಕಾರ ಗ್ರಾ.ಪಂಗಳಲ್ಲಿ ಪ್ರತಿದಿನ ಬೆಳಿಗ್ಗೆ ಧ್ವಜಾರೋಹಣ ನೆರೆವೇರಿಸಬೇಕೆಂದು ಪಿಡಿಓಗಳಿಗೆ ಆದೇಶ ನೀಡಿತ್ತು. ಆದರೆ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲದಂತೆ ಧ್ವಜಾರೋಹಣ ನೆರೆವೇರಿಸದೆ ಅಗೌರವ ಸೂಚಿಸಿದ ಘಟನೆ ನಡೆದಿದೆ.

ತಾಲೂಕಿನ ಮನ್ಸಲಾಪೂರ ಗ್ರಾ.ಪಂನಲ್ಲಿ ಪ್ರತಿ ದಿನ ಬೆಳಿಗ್ಗೆ 6.ಗಂಟೆಗೆ ಎಂದಿನಂತೆ ಧ್ವಜಾರೋಹಣ ಮಾಡಲಾಗುತ್ತಿತ್ತು. ಗ್ರಾ.ಪಂ ಕಟ್ಟಡ ಶೀಥಿಲಾವಸ್ಥೆಯಲ್ಲಿದ್ದ ಕಾರಣ ಗ್ರಾ.ಪಂನ್ನು ಕಳೆದ ತಿಂಗಳಿನಲ್ಲಿ ಊರ ಹೊರಗಿನ ಬಾಡಿಗೆ ಮನೆಯೊಂದರಲ್ಲಿ ಸ್ಥಳಾಂತರಗೊಳಿಸಲಾಗಿದೆ. ಮೊದಲಿದ್ದ ಗ್ರಾ.ಪಂ ಕಛೇರಿಯಲ್ಲಿ ಧ್ವಜಾರೋಹಣ ಮಾಡದೇ ಬಾಡಿಗೆ ಕಛೇರಿಯಲ್ಲಿ ಧ್ವಜಾರೋಹಣಕ್ಕೆ ವ್ಯವಸ್ಥೆ ಇದ್ದರೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಧ್ವಜಾರೋಹಣ ನೆರೆವೇರಿಸದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ.
ಪ್ರತಿದಿನ ಧ್ವಜಾರೋಹಣ ಹಾರಿಸಬೇಕೆಂಬ ನಿಯಮವಿದ್ದರೂ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯರ ಗಮನಕ್ಕೆ ಇಲ್ಲ. ಪ್ರತಿದಿನ ಕಛೇರಿಗೆ ಬಂದು ಹೋಗುತ್ತಿದ್ದರೂ ಧ್ವಜಾರೋಹಣ ಸ್ಥಂಭದಲ್ಲಿ ಧ್ವಜಹಾರಿಸದಿರುವುದನ್ನು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ಈ ಕೂಡಲೇ ನಿರ್ಲಕ್ಷ ವಹಿಸಿದ ಪಿಡಿಓ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here