ಚಲಿಸುತ್ತಿದ್ದ ಮೋಟಾರ್ ನಲ್ಲಿ ಬೆಂಕಿ..

0
172

ಕೋಲಾರ /ಬಂಗಾರಪೇಟೆ:ಚಲಿಸುತ್ತಿದ್ದ ಮೋಟಾರ್ ನಲ್ಲಿ ದಿಡೀರನೆ ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು, ಬೂದಿಕೋಟೆ ವೃತ್ತದ ಸಮೀಪ ಕೋಲಾರ ಮುಖ್ಯರಸ್ತೆಯಲ್ಲಿ ಮೋಟಾರ್ ಚಲಿಸಿಕೊಂಡು ಹೋಗುತ್ತಿದ್ದಾಗ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತು, ತಕ್ಷಣ ಸವಾರಕ ಸ್ಥಳದಲ್ಲೆ ಗಾಡಿಯಿಂದ ಜಿಗಿದು ಗಾಬರಿಯಾಗಿ ನಿಂತುಕೊಂಡು ಉರಿಯುತ್ತಿದ್ದ ಬೆಂಕಿಯನ್ನೇ ನೋಡುತ್ತಿದ್ದ, ಅಕ್ಕ ಪಕ್ಕದಲ್ಲಿದ್ದವರು ತಕ್ಷಣ ನೀರಿನಿಂದ ಬೆಂಕಿಯನ್ನ ಹಾರಿಸಿದರು, ವಾಹನದಿಂದ ಪೆಟ್ರೋಲ್ ಸೋರಿಕೆಯಾಗಿ ಇಂಜಿನ್ ಮೇಲೆ ಹರಿದಾಗ ಬಿಸಿಗೆ ಬೆಂಕಿ ಕಾಣಿಸಿಕೊಂಡಿದೆ, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

LEAVE A REPLY

Please enter your comment!
Please enter your name here