ಚಾಲಕ ಮತ್ತು ನಿರ್ವಾಹಕರ ವಿರುದ್ಧ ದೂರು

0
177

ಕೋಲಾರ:ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಕೆಎಸ್ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕೋಲಾರ ಜಿಲ್ಲಾ ಘಟಕ ವ್ಯವಸ್ಥಾಪಕರಾದ ಕೆಂಪರಾಜು ರವರಿಗೆ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಸಂಚಾಲಕರಾದ ಹರೀಶ್, ತಾಲ್ಲೂಕು ಸಂಚಾಲಕರಾದ ನವೀನ್, ವಿದ್ಯಾರ್ಥಿಗಳು ಗಜೇಂದ್ರ,ಅಶೋಕ್ ಮುಂತಾದವರು ಇದ್ದರು.

ಘಟನೆಯ ವಿವರ:
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇದೇ ತಿಂಗಳು 3 ರಂದು ಕೋಲಾರ ವಿಭಾಗದ ಬಸ್ ಬೆಂಗಳೂರಿಗೆ ಹೊರಟಿದ್ದ ವೇಳೆ ಸುಪ್ರೀತ್ ಈ ಬಸ್ಸಿಗೆ ಹತ್ತಿ ಉಳಿದ ವಿದ್ಯಾರ್ಥಿಗಳು ಬರುತ್ತಿದ್ದಾರೆ,ವಾಹನ ನಿಲ್ಲಿಸಿ ಎಂದು ಹೇಳಿದ್ದ.ಇದರಿಂದ ಸಿಡಿಮಿಡಿಗೊಂಡ ನಿರ್ವಾಹಕಿ ರತ್ನಮ್ಮ ಸುಪ್ರೀತ್ ನನ್ನು ನಿಂದಿಸಿ ಬಸ್ಸಿನಿಂದ ಕೆಳಗಿಳಿಸಲು ಯತ್ನಿಸಿದ್ದಾರೆ. ವಿದ್ಯಾರ್ಥಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ ಚಾಲಕ ಮಂಜುನಾಥ್ ವಿದ್ಯಾರ್ಥಿಗೆ ಥಳಿಸಿ, ಮೊಬೈಲ್ ಕಸಿದುಕೊಂಡಿದ್ದಾರೆ.ಕೇವಲ ಬಸ್ ಹತ್ತುವ ವಿಚಾರದಲ್ಲಿ ನಿರ್ವಾಹಕಿ ಹಾಗೂ ವಿದ್ಯಾರ್ಥಿ ಸುಪ್ರೀತ್ ನಡುವೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ನಗರಠಾಣೆ ಪಿಎಸ್ ಐ ಪ್ರದೀಪ್ ಮುಖಂಡರಿಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ವ್ಯವಸ್ಥಾಪಕ ಕೆಂಪರಾಜು ದೂರು ಆಲಿಸಿ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು. ಆದರೆ ಯಾವುದೇ ಕ್ರಮ ಜರುಗಿಸದ ಕಾರಣ ಮತ್ತೆ ಮನವಿ ಸಲ್ಲಿಸಿ, ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸ ದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಎಚ್ಚರಿಸಲಾಯಿತು.

LEAVE A REPLY

Please enter your comment!
Please enter your name here