ಚಿತ್ರದುರ್ಗ/ ಮೊಳಕಾಲ್ಮೂರು : ತಾಲೂಕಿನ ರಾಂಪುರದಲ್ಲಿ ನಡೆದ ಸರಣಿ ಭೀಕರ ಅಪಘಾತದಲ್ಲಿ ಗಾಯಗಿಂಡವರನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದವರಲ್ಲಿ ಮೂರುಜನ ಮೃತಪಟ್ಟಿದ್ದಾರೆ.
ರಾಂಪುರದಿಂದ ಅಂಬ್ಯುಲೇನ್ಸ್ ನಲ್ಲಿ ಬಳ್ಳಾರಿ ವಿಮ್ಸ್ ಗೆ 21 ಜನರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಲಿಂಗಾರೆಡ್ಡಿ(10) ಜಯಮ್ಮ(45) ಮತ್ತು ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದು ವ್ಯಕ್ತಿಯ ಹೆಸರು ಇನ್ನೂ ಪತ್ತೆಯಾಗಿಲ್ಲ. ಮೂವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಬಳ್ಳಾರಿ ವಿಮ್ಸ್ ಅಧೀಕ್ಷಕ ಡಾ. ಶ್ರೀನಿವಾಸ್, ಆಡಳಿತಾಧಿಕಾರಿ ಅನ್ನಪೂರ್ಣ ತುರ್ತು ಚಿಕಿತ್ಸಾ ಘಟಕ ದಲ್ಲಿಯೇ ಇದ್ದು ಚಿಕಿತ್ಸೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇನ್ನೂ ಬಳ್ಳಾರಿ ಜಿಲ್ಲೆಗೆ ಬರ ಅಧ್ಯಯನ ಮತ್ತು ನಾನಾ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು. ನಂತರ ಮಾತನಾಡಿದ ಸಚಿವ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದೇವೆ. ಯಾವುದೇ ಸಮಸ್ಯೆ ಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಬರವಸೆ ನೀಡಿದ್ದಾರೆ.