ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು..?

0
109

ಮಳವಳ್ಳಿ: ದಡಾರ ಚುಚ್ಚು ಮದ್ದು ಪಡೆದ ಬಳಿಕ ಎರಡು ವರ್ಷದ ಮಗುವಿಗೆ ಜ್ವರ ಕಾಣಿಸಿ ಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ ಎಂಬ ಆರೋಪ ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.

ಹಾಡ್ಲಿಗ್ರಾಮ ಸಂತೋಷ ಹಾಗೂ ಹೇಮಲತಾ ದಂಪತಿಗಳ ಎರಡು ತಿಂಗಳ ನಮ್ರತ ಎಂಬ ಹೆಣ್ಣುಮಗು ಮೃತಪಟ್ಟ ದುದೈವಿ. ಫ್ರೆಬವರಿ 8 ರಂದು ಗುರುವಾರ ಡಡಾರದ ಚುಚ್ಚು ಮದ್ದು ನೀಡಿದ್ದು ಮಾರನೇದಿನ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು , ನಂತರ ಅಂಗನವಾಡಿಯಲ್ಲಿ ನಾಗರತ್ನ ಎಂಬುವವರಿಂದ ಜ್ವರ ಔಷದಿ ತೆಗೆದು ಹಾಕಿದ್ದರು ಎನ್ನಲಾಗಿದೆ ಆದರೂ ಜ್ವರ ಕಡಿಮೆಯಾಗದ ಕಾರಣ ಮಳವಳ್ಳಿ ಖಾಸಗಿ ಆಸ್ವತ್ರೆಗೆ ತೋರಿಸಲಾಗಿ ಜಿಲ್ಲಾಸ್ವತ್ರೆಗೆ ಸೇರಿಸುವಂತೆ ತಿಳಿಸಲಾಗಿ ಜಿಲ್ಲಾಸ್ವತ್ರೆ ಸೇರಿಸಲಾಗಿತ್ತು.
ಕಳೆದ ರಾತ್ರಿ 8: _30 ಸಮಯದಲ್ಲಿ ಮೃತ ಪಟ್ಟಿದ್ದು ಶವವನ್ನು ಹಾಡ್ಲಿ ಗ್ರಾಮಕ್ಕೆ ತರಲಾಗಿದ್ದು, ಸ್ಥಳಕ್ಕೆ ಹಲಗೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಬೇಟಿ ನೀಡಿ ಪರಿಶೀಲನೆ ನಡೆಸಿ ಚುಚ್ಚುಮದ್ದು ನೀಡಿದ ನಸ್೯ ನಿಂದಲೂ ಮಾಹಿತಿ ಪಡೆದರು. ಒಟ್ಟಿನಲ್ಲಿ ಸಾವಿನ ಬಗ್ಗೆ ನಿಗೂಡವಾಗಿದ್ದು ಸತ್ಯಾಂಶ ತನಿಖೆಯಿಂದ ಹೊರ ಬೀಳಬೇಕಾಗಿದೆ .
‌ ‌‌‌ ‌
ವರದಿ ಎ.ಎನ್ ಲೋಕೇಶ್ ಮಳವಳ್ಳಿ. ನಮ್ಮೂರುಟಿವಿ

LEAVE A REPLY

Please enter your comment!
Please enter your name here