ಸರ್ಕಾರದಿಂದ ನಷ್ಟಪರಿಹಾರ ಕೊಡಿಸುವ ಬರವಸೆ

0
331

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕಟ್ಟಡ ಶೀಟ್ ಮೇಲ್ಚಾವಣಿಯು ಸಂಪೂರ್ಣ ಬಿದ್ದು ಹೋಗಿರುವುದಲ್ಲದೇ ಇದರಲ್ಲಿದ್ದ ರೇಷ್ಮೆ ಹುಳು ಸಹ ಸಂಪೂರ್ಣ ನಾಶ ವಾಗಿದೆ. ಇದು ಅಲ್ಲದೆ ಸೌತೆಕಾಯಿ ತೋಟ ಕೋಡ ನಾಶವಾಗಿದೆ. ತೆಂಗಿನಕಾಯಿ ಮರ ಕೂಡ ಬಿರುಗಾಳಿ ಯಿಂದ ಮುರಿದು ಲೈಟ್ ಕಂಬದ ಮೇಲೆ ಯಿಂದ ಮನೆ ಯ ಮೇಲೆ ಬಿದ್ದಿದೆ, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರುವ ನೀಲಗಿರಿ ಮರಗಳು ಸಹ ಬಿದ್ದಿದೆ, ಕೈವಾರ ದಲ್ಲಿ ಇರುವ ಸರ್ಕಾರಿ ಶಾಲೆಯ ಮೇಲ್ಚಾವಣಿಯು ಸಂಪೂರ್ಣ ನಾಶವಾಗಿದೆ.ಇದರಿಂದ ಜನರಿಗೆ ಯಾವುದೇ ಪ್ರಣ ಅಪಾಯ ಸಂಭವಿಸಲಿಲ್ಲ.
ಈ ಸುದ್ದಿ ಚಿಂತಾಮಣಿ ಕ್ಷೇತ್ರದ ಶಾಸಕರಾದ ಎಂ ಕೃಷ್ಣ ರೆಡ್ಡಿ ಗಮನಕ್ಕೆ ಬಂದ ತಕ್ಷಣವೇ  ಕೈವಾರ ಗ್ರಾಮಕ್ಕೆ ಬೇಟಿನೀಡಿ ಚಿಂತಾಮಣಿ ತಾಲ್ಲೂಕಿನ ತಹಸೀಲ್ದಾರ್ ಎಂ ಗಂಗಪ್ಪ ರವರನ್ನು ಕರೆಸಿ ಜನರಿಗಾದ ನಷ್ಟದ ಸಮೀಕ್ಷೆ  ಮಾಡಿ ತಡಮಾಡದೆ ಸರ್ಕಾರ ದಿಂದ ಬರುವ ನಷ್ಟ ಪರಿಹಾರವನ್ನು ಕೊಡಿಸಲು ಶಾಸಕರು ತಹಸೀಲ್ದಾರ್ ಗೆ ಸೂಚಿಸಿದ್ದಾರೆ. ಬೆಸ್ಕಮ್, ರೇಷ್ಮೆ ,ಡಾಕ್ಟರ್, ಸಂಬಂಧ ಪಟ್ಟ ಅಧಿಕಾರಗಳನ್ನು ಕರಿಸಿ ಎರಡು ದಿನಗಳ ಒಳಗೆ ವರದಿಯನ್ನು ಸಲಿಸುವಂತೆ ಶಾಸಕರು ಮತ್ತು ತಹಸೀಲ್ದಾರ್ ಹೇಳಿದ್ದಾರೆ.

ನಮ್ಮೂರು ವರದಿಗಾರ ಇಮ್ರಾನ್ ಖಾನ್ ಅರ್ ಕೆ ಚಿಂತಾಮಣಿ.

LEAVE A REPLY

Please enter your comment!
Please enter your name here