ಚಿತ್ರ ಮಂದಿರ ಮಾಲೀಕರ ಮನವೊಲಿಸಿದ ನಗರಸಭೆ :

0
169

ಚಾಮರಾಜನಗರ/ಕೊಳ್ಳೇಗಾಲ ಪಟ್ಟಣದಲ್ಲಿ ಹೆದ್ದಾರಿ ರಸ್ತೆ ಅಗಲಿಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದಕ್ಕೆ  ಜಾಗಗಳ ಕೆಲವು ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದೆ ಪ್ರಮುಖ ಕಾರಣವಾಗಿದೆ. ಈಬೆನ್ನಲ್ಲೆ ನ್ಯಾಯಾಲದ ಮೊರೆ ಹೊಕ್ಕಿರುವ 

ಜಾಗಗಳ ಮಾಲೀಕರ ಮನವೊಲಿಸುವ ಕಾಯ೯ಕ್ಕೆ ನಗರಸಬೆ ಮುಂದಾಗಿದ್ದು ಶುಕ್ರವಾರ ಶಾಂತಿ ಚಿತ್ರಮಂದಿರ ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಈಹಿನ್ನೆಲೆ ಇಂದು ಮದ್ಯಾಹ್ನ ಶಾಂತಿ ಚಿತ್ರಮಂದಿರದ ಕಾಂಪೌಂಡ್ ತೆರವಿಗೂ ಮುನ್ನ ಒಳಾಂಗಣದಲ್ಲಿ  ಚರಂಡಿ ನಿಮಾ೯ಣಕ್ಕಾಗಿ ತೆರವು ಕಾಯಾ೯ಚರಣೆಗೆ
ನಗರಸಬೆ ಆಯುಕ್ತರು ಮುಂದಾದರು, ಈಸಂದಭ೯ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಂತಿ ಚಿತ್ರಮಂದಿರದ ಮಾಲೀಕರ ಮನವೊಲಿಸಲಾಗಿದೆ.
ಆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದೇ ರೀತಿಯಲ್ಲಿ ತಡೆಯಾಜ್ಞೆ ತಂದಿರುವ ಎಲ್ಲಾ ಮಾಲೀಕರನ್ನು ಹಂತ ಹಂತವಾಗಿ ಮನವೊಲಿಸಲಾಗುವುದು ಎಂದು ತಿಳಿಸಿದರು

LEAVE A REPLY

Please enter your comment!
Please enter your name here