ಚಿರತೆ ದಾಳಿಗೆ, ಮೇಕೆ ಬಲಿ

0
166

ಬಳ್ಳಾರಿ /ಹೊಸಪೇಟೆ:ಕುರಿಗಾಹಿ ಎದುರಲ್ಲಿ ಚಿರತೆಯೊಂದು ಮೇಕೆ ಮೇಲೆ ದಾಳಿ ನಡೆಸಿ ಎತ್ತೊಯ್ದ ಘಟನೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಬಳಿಯ ಧರ್ಮದಗುಡ್ಡದಲ್ಲಿ ಸೋಮವಾರ ಜರುಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ನಾಗೇನಹಳ್ಳಿಯ ಮರಿಗೆಟ್ಟಪ್ಪ ಧರ್ಮದ ಗುಡ್ಡದಲ್ಲಿ ಎಂದಿನಂತೆ ಕುರಿ ಮೇಕೆಗಳನ್ನು ಮೇಯಿಸಿಲು ಹೋದಾಗ ಮೇಕೆಯೊಂದು ಚಿರತೆ ಬಾಯಿಗೆ ತುತ್ತಾಗಿದ್ದು, ಕುರಿಗಾಹಿಗಳಲ್ಲಿ ಆತಂಕ ಹೆಚ್ಚಿಸಿದೆ.
ಕುರಿಗಾಹಿಗಳ ಕಣ್ಣೆದುರಿಗೆ ಚಿರತೆಯೊಂದು ಮೇಕೆಯನ್ನು ಬಾಯಲ್ಲಿ ಕಚ್ಚಿ ಎಳೆದೋಯ್ಯುತ್ತಿರುವ ದೃಷ್ಯವನ್ನು ಕಂಡ ಕುರಿಗಾಹಿಗಳು ಭಯಬೀತರಾಗಿ ಆತಂಕಕ್ಕೀಡಾಗಿದ್ದಾರೆ. ಈ ಹಿಂದೆ ಐದಾರು ಕುರಿ ಮೇಕೆಗಳು ಚಿರತೆ ಹಾವಳಿಗೆ ಬಲಿಯಾಗಿವೆ. ಈ ಕುರಿತು ನಾಗೇನಹಳ್ಳಿ ಗ್ರಾಪಂ ಪಿಡಿಒ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಧರ್ಮದ ಗುಡ್ಡದಲ್ಲಿ ನಿತ್ಯ ಎರಡು ಚಿರತೆಗಳು ಕಣ್ಣಿಗೆ ಕಾಣಿಸುತ್ತಿವೆ. ಧರ್ಮದ ಗುಡ್ಡದ ತುತ್ತ ತುದಿಗೆ ನಿತ್ಯ ಜನರಿಗೆ ಕಾಣಿಸಿಕೊಳ್ಳುತ್ತವೆ. ಯಾವಾಗ ಯಾರ ಮೇಲೆ ದಾಳಿ ಮಾಡುತ್ತವೆ ಎಂಬುದು ಗೊತ್ತಾಗೋಲ್ಲ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಚಿರತೆ ಹಾವಳಿ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಕುರಿಗಾಹಿ ಪಂಪಾಪತಿ ಆಗ್ರಹಿಸಿದ್ದಾರೆ.
——————–

LEAVE A REPLY

Please enter your comment!
Please enter your name here