ಚುನಾವಣಾಧಿಕಾರಿಗಳಿಂದ ಸುದ್ದಿ ಗೋಷ್ಠಿ…

0
182

ತುಮಕೂರು/ಪಾವಗಡ:ಕರ್ನಾಟಕ ವಿಧಾನ ಸಭೆ ಚುನಾವಣೆ 2018 ರ 137 ಪಾವಗಡ (ಎಸ್.ಸಿ) ವಿಧಾನಸಭಾ ಕ್ಷೇತ್ರದಲ್ಲಿ 246 ಮತಗಟ್ಟೆಗಳಿದ್ದು,ಒಟ್ಟು 1,94,653 ಮತದಾರರು ಇದ್ದು,ಗಂಡು 99,871,ಹೆಣ್ಣು 94,778,ಇತರೆ 4 ಇದ್ದು,ಮೇ 12 ರಂದು ಚುನಾವಣೆ ನಡೆಯಲಿದೆ ಎಂದು ಪಾವಗಡ ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿ ವೀರಪಾಕ್ಷಯ್ಯ ರವರು ತಿಳಿಸಿದರು.

ಬುಧವಾರ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ ಹೀಗಾಗಲೇ ಚುನಾವಣೆಯ ಹಿನ್ನೆಲೆಯಲ್ಲಿ ಮಾರ್ಚಿ 27 ರಿಂದ ನೀತಿ ಸಂಹಿತೆ ಜಾರಿಯಾಗಿದ್ದು,ಏಪ್ರಿಲ್ 17 ರಿಂದ ನಾಮ ಪತ್ರ4 ಸಲ್ಲಿಕೆ ಪ್ರಾರಂಭವಾಗಿ,ಏಪ್ರಿಲ್ 24 ರಂದು ನಾಮ ಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು,ಏಪ್ರಿಲ್ 25 ರಂದು ನಾಮ ಪತ್ರ ಪರಿಶೀಲನೆ,ಏಪ್ರಿಲ್ 27 ರಂದು ನಾಮ ಪತ್ರ ಹಿಂಪಡೆಯುವಿಕೆ ಕಾರ್ಯಾ ನಡೆಯುತ್ತಿದ್ದು,ಮೇ 12 ರಂದು ಚುನಾವಣೆ ನಡೆದು.ಮೇ 15 ರಂದು ಮತ ಎಣಿಕೆ ಕಾರ್ಯಾ ನಡೆಯುತ್ತದೆ ಎಂದು ತಿಳಿಸಿದರು.
ಪಾವಗಡ ತಾಲ್ಲೂಕಿನ ಗಡಿ ಭಾಗಗಳಾದ ಮಾರಮ್ಮನಹಳ್ಳಿ,ದೊಡ್ಡಹಳ್ಳಿ, ವೆಂಕಟಮ್ಮನಹಳ್ಳಿ,ಲಿಂಗದಹಳ್ಳಿ,ಅರಸೀಕೆರೆ(ಚಿಟ್ನಡುಕ ಕ್ರಾಸ್),ಕೊಡಮಡಗು, ದೊಮ್ಮತಮರಿ,ರಾಜವಂತಿ 8 ಚೆಕ್ ಪೋಸ್ಟ್ ತೆರೆದಿದ್ದು,ಪ್ರತಿ ಚೆಕ್ ಪೋಸ್ಟ್‍ನಲ್ಲಿ 8*3=24 ಗಂಟೆಗಳ ಕಾಲ ಸರದಿಯ ಮೇಲೆ ಕರ್ತವ್ಯ ನಿರ್ವಹಿಸಲು 24 ಸ್ಟಾಟಿಕ್ ಅರ್ವೆಲೆನ್ಸ್ ಅಧಿಕಾರಿಗಳನ್ನು ನೇಮಿಸಿ ಯಾವುದೇ ವಾಹನವನ್ನು ಬಿಡದೇ ತನಿಕೆ ಕೈಗೊಂಡು ತಪ್ಪುಸ್ತರ ಮೇಲೆ ಕಾನೂನು ಕಿರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಚುನಾವಣೆ ಸೆಕ್ಟರ್‍ಅಧಿಕಾರಗಳು ಒಟ್ಟು 21 ಮಂದಿ ಸೆಕ್ಟರ್‍ಅಧಿಕಾರಿಗಳನ್ನು ನೇಮಕ ಮಾಡುದ್ದು,ಕಸಭಾ ಮತ್ತು ನಿಡಗಲ್ ಹೋಬಳಿ ವ್ಯಾಪ್ತಿಗೆ ಲೋಕೋಪಯೋಗಿ ಇಲಾಖೆಯ ಇಂಜನೀಯರ್ ಲಕ್ಷ್ಮಯ್ಯ, ಬೆಸ್ಕಂ ಎ.ಇ.ಇ ಹರೀಶ್,ಎಸ್.ಡಿ.ಹೆಚ್ ಸುಧಾಕರ್ ಹಾಗೂ ವೈ.ಎನ್.ಹೊಸಕೋಟೆ ಮತ್ತು ನಾಗಲಮಡಿಕೆ ಲೋ ಇಲಾಖೆಯ ಎ.ಇ.ಇ ಲೋಕೇಶ್, ಎ.ಡಿ.ಎ ಹನುಮಂತರಾಜು,ಪಿ.ಆರ್.ಇ.ಡಿ ಇಲಾಖೆಯ ಎ.ಇ.ಇ ಈಶ್ವರಯ್ಯ ರವರನ್ನು ನೇಮಿಸಲಾಗಿದೆ3 ಎಂದು ತಿಳಿಸಿದ್ದರು.
ಚೆಕ್ ಪೋಸ್ಟ್ ಮತ್ತು ಸೆಕ್ಟರ್ ಅಧಿಕಾರಿಗಳ ಜೋತೆ ವಿಡಿಯೋ ವ್ಯೂವಿಂಗ್ ಕೆಲಸ ನಿರ್ವಹಿಸಲು 1 ತಂಡ ಹಾಗೂ ವಿಡಿಯೋ ಸರ್ವೆಲೆನ್ಸ್‍ಗಾಗಿ 2 ತಂಡಗಳನ್ನು ರಚಿಸಲಾಗಿದೆ ಎಂದರು.
246 ಮತಗಟ್ಟೆಗಳಲ್ಲಿ 15 ಅತಿ ಸೂಕ್ಷ್ಮ,59 ಸೂಕ್ಷ್ಮ,106 ನಾರ್ಮಲ್,12 ಮತಗಟ್ಟೆಗಳಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಮತ ಚಲಾವಣೆ ಅಗಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಸಿಬ್ಬಂದಿ 246*4+1=1230,25 ರಿಸರ್ವ್=125,ಒಟ್ಟು 271*4+1=1355 ಜನ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದಿದ್ದಾರೆ.
ಏಪ್ರಿಲ್ 8 ರಂದು ಹೊಸದಾಗಿ ಮತದಾರರು ಸೆರ್ಪಡೆಯಲ್ಲಿ ಕಯಬಿಟ್ಟಿದ್ದರೆ ಅಂತಹ ಮತದಾರರು ತಮ್ಮ ಗ್ರಾಮದೆ ಮತಗಟ್ಟೆಯಲ್ಲಿ ಬಿ.ಎಲ್.ಓಗಳು ಹತ್ತಿರ ಅರ್ಜಿ ಪಡೆದು ನೋಣದಾಣಿ ಅಭಿಯಾನದಲ್ಲಿ ಮತದಾರರ ಪಟ್ಟಿಗೆ ಸೆರ್ಪಡಿಸಿಕೋಳ್ಳಬಹುದೆಂದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ವರದರಾಜು,ಸುರೇಶ್,ಗೀರಿಶ್ ಹಾಜರಿದ್ದರು.

LEAVE A REPLY

Please enter your comment!
Please enter your name here