ಚುನಾವಣಾ ಪ್ರಾಧಿಕಾರಕ್ಕೆ ದೂರು

0
235

ಚುನಾವಣಾ ಪ್ರಾಧಿಕಾರಕ್ಕೆ ದೂರು
ಬಳ್ಳಾರಿ /ಹೊಸಪೇಟೆ:ನಗರದಲ್ಲಿ ಗುರುವಾರ ನಡೆದ ಯುವ ಕಾಂಗ್ರೆಸ್ ಸಮಿತಿಯ ಆಂತರಿಕ ಚುನಾವಣಾ ಮತ ಎಣಿಕೆ ಕಾರ್ಯ ಪಾರದರ್ಶಕವಾಗಿ ನಡೆದಿಲ್ಲ ಎಂದು ಆರೋಪಿಸಿ, ಕೇಂದ್ರೀಯ ಯುವ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರಕ್ಕೆ ಲಿಖಿತ ದೂರು ಸಲ್ಲಿಸಲಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಅಭ್ಯರ್ಥಿ ಬಾಣದ ಗಣೇಶ್, ಕಂಪ್ಲಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಅಭ್ಯರ್ಥಿ ಮಾವಿನಹಳ್ಳಿ ರಮೇಶ್ ಹಾಗೂ ಲೋಕಸಭಾ ಅಭ್ಯರ್ಥಿ ಗುಡೇಕೋಟೆ ನೌಶಾದ್, ಕೇಂದ್ರೀಯ ಯುವ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.
ಕಳೆದ ಮೇ 14 ರಿಂದ 17 ರವರೆಗೆ ನಡೆದ ವಿಧಾನಸಭಾ, ಲೋಕಸಭಾ,ಮತ್ತು ರಾಜ್ಯ ಯುವ ಕಾಂಗ್ರೆಸ್ಸಿನ ವಿವಿಧ ಹುದ್ದೆಗಳಿಗೆ ನಡೆದಿರುವ ಚುನಾವಣೆಗಳಿಗೆ ಸಂಬಂದಿಸಿದಂತೆ ಬಳ್ಳಾರಿ ಜಿಲ್ಲೆಯ ವಿಜಯನಗರ,ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಣಬಲ ಹೊಂದಿದ ಅಭ್ಯರ್ಥಿಗಳ ಪರವಾಗಿ ಖೊಟ್ಟಿ ಮತಗಳನ್ನು ಚಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮಾಜಿ ಸಚಿವ ಎನ್.ಎಂ.ನಬಿ ಪುತ್ರ ನೂರ್ ಅಹ್ಮದ್ ತಮ್ಮ ಪ್ರಭಾವ ಬಳಸಿ ತಮ್ಮ ಬೆಂಬಲಿಗರಿಗೆ ಖೊಟ್ಟಿ ಮತದಾನ ಮಾಡಲು ಚುನಾವಣಾಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಹಣಬಲ ಪ್ರದರ್ಶಿಸಿರುವ ಮಾಜಿ ಸಚಿವ ಎನ್.ಎಂ.ನಬಿ ಪುತ್ರ ನೂರ್ ಅಹ್ಮದ್, ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಬೆಂಬಲಿಗರೊಂದಿಗೆ ನಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಈ ಘಟನೆಗೆ ಕುರಿತಂತೆ ಕೇಂದ್ರೀಯ ಯುವ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದ್ದು, ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು
ಯುವ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here