ಚುನಾವಣೆ ಸಭೆ..

0
130

ಚಿಕ್ಕಬಳ್ಳಾಪುರ/ಚಿಂತಾಮಣಿ:ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು ಈ ಹಿನ್ನಲೆಯಲ್ಲಿ ಚಿಂತಾಮಣಿ ತಾಲೂಕಿಗೆ ಚುನಾವಣೆ ಅಧಿಕಾರಿಗಳಾದ ಸವಿತಾ ಮತ್ತು ತಾಲ್ಲೂಕಿನ ದಂಡಾಧಿಕಾರಿಗಳಾದ ವಿಶ್ವನಾಥ್ ನೇತೃತ್ವದಲ್ಲಿ ನಗರ ಸಭೆ ಸಭಾಂಗಣದಲ್ಲಿ ಚುನಾವಣೆಯ ಪತ್ರಿಕಾಗೋಷ್ಠಿ.ಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ನೀತಿ ಸಂಹಿತೆಯ ಜಾರಿಗೆ ಬಂದಿದೆ. ಅದರಂತೆ ಪಕ್ಷದ ಯಾವುದೇ ಪಕ್ಷದ ಬ್ಯಾನರ್ ಭಾವಚಿತ್ರಗಳ ಪೋಸ್ಟರ್ 24 ಗಂಟೆಗಳ ಒಳಗೆ ತೆಗೆಯಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡಬೇಕು ಎಂದರು.

ತಾಲ್ಲೂಕಿನಲ್ಲಿ ನಾಲ್ಕು ಚೆಕ್ ಪೊಸ್ಟ್ ಆಗಿವೆ . ಕೈವಾರ ,ಮಾಡಿಕೆರೆ ಕ್ರಾಸ್, ಕಂಬಾಲಹಳ್ಳಿ,ಅನಕಾಲ್ ಮಡಗು, ಮಾಡಲಾಗಿದು ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮರಾಗಳು ಸಹಾ ಅಳವಡಿಸಲಾಗುತ್ತದೆ ಎಂದರು.
ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಚುನಾವಣಾಧಿಕಾರಿಗಳಾದ ಸವಿತ ರವರ ಹತ್ತಿರ ಪರವಾನಗಿ ತೆಗೆದುಕೊಂಡು ಮಾಡಬೇಕು ಎಂದರು.

LEAVE A REPLY

Please enter your comment!
Please enter your name here