ಚೈನಾ ವಸ್ತುಗಳನ್ನು ತ್ಯಜಿಸಿ

0
138

ಬೆಂಗಳೂರು/ಮಹದೇವಪುರ:- ಬೆಂಗಳೂರಿನ ಕಾಡುಗೋಡಿ ವಾರ್ಡ್ ನಲ್ಲಿ ೭೧ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾಡುಗೋಡಿಯ ಸರ್ಕಾರಿ ಮಾದರಿ ಪ್ರೌಡ ಶಾಲೆ ಅವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಕಾಡುಗೋಡಿ ವಾರ್ಡ್ ಪಾಲಿಕೆ ಸದಸ್ಯ ಮುನಿಸ್ವಾಮಿ ದ್ವಜಾರೋಹಣ ನಡೆಸಿದರು. ಕಾಡುಗೋಡಿ ಎಲ್ಲಾ ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಭಾಗವಹಿಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ನಮ್ಮ ದೇಶವನ್ನು ಉಳಿಸಿಕೊಳ್ಳಲು ಚೈನಾ ವಸ್ತುಗಳನ್ನು ಕರೀದಿಸುವದನ್ನು ನಿಲ್ಲಿಸ ಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಶ್ವತ್ಥ ರೆಡ್ಡಿ, ಚೆನ್ನ ಸಂದ್ರ ಚಂದ್ರಶೇಖರ್,ಅಸ್ಲಾಂ ಪಾಷಾ, ಬಾಬು, ಸಿಂಗ್, ಪ್ರದೀಪ್ ಮುಂದಾದರು ಹಾಜರಿದ್ದರು.

LEAVE A REPLY

Please enter your comment!
Please enter your name here