ಜನಪದರು” ವತಿಯಿಂದ ನಾಟಕೋತ್ಸವ

0
428

ಬೆಂಗಳೂರು/ಮಹದೇವಪುರ : 15ನೇ ಶತಮಾನದಲ್ಲಿ ಬೆಂಗಳೂರನ್ನು ಕಟ್ಟಿಬೆಳೆಸಲು ಕೆಂಪೇಗೌಡರು ಎದುರಿಸಿದ ಸವಾಲುಗಳನ್ನು ನಾಟಕದ ಮುಖೇನ ಚಿತ್ರಿಸಲು ಸಿರಿಗೆ ಸೆರೆ ಎಂಬ ನಾಟಕ ರಚಿಸಲಾಗಿದೆ ಎಂದು ನಿರ್ಧೇಶಕ ವರ್ತೂರು ಸುರೇಶ್ ತಿಳಿಸಿದರು. ಮಹದೇವಪುರ ಕ್ಷೇತ್ರದ ನಿಂಬೇಕಾಯಿಪುರದ ಅಭಯ ಆಂಜನೇಯ ಸ್ವಾಮಿ ದೇವಾಲಯ ಆವರಣದ  ಸಮೀಪ ಜನಪದರು ವೇದಿಕೆವತಿಯಿಂದ ಹಮ್ಮಿಕೊಂಡಿದ್ದ “ಸಿರಿಗೆ ಸೆರೆ” ಎಂಬ ಕೆಂಪೆಗೌಡರ ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಜಗತ್ತಿನ ಪ್ರಮುಖ ನಗರವಾಗಿ ಬೆಳೆದಿರುವ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಕನಸಿನ ಕೂಸಾಗಿದೆ ದೂರದೃಷ್ಟಿಯ ಚಾರಿತ್ರಿಕ ಮಾನವೀಯ ಮೌಲ್ಯ ಮೈಗೂಡಿಸಕೊಂಡ ಸದಾ ಪ್ರಜಹಿತ ತ್ಯಾಗ ಹಾಗು ಸಾಂಸ್ಕೃತಿಕ ವ್ಯಕ್ತಿತ್ವದ ಬದುಕಿನ ವಿಭಿನ್ನ ನಾಟಕ ಪ್ರಯೋಗವೇ ಸಿರಿಗೆ ಸೆರೆಯಾಗಿದೆ ಎಂದು ಹೇಳಿದರು.  ಸ್ಥಳೀಯ ಪ್ರತಿಭೆಗಳನ್ನು ಹೊರ ತರಲು “ಜನಪದರು’ ಎಂಬ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪನೆ ಮಾಡಿ ಪ್ರತಿ ತಿಂಗಳು ಎರಡನೇ ಶನಿವಾರ ನಾಡಿನ ಮತ್ತು ರಾಷ್ಟ್ರೀಯ ಮಟ್ಟದ ವಿಶೇಷ ನಾಟಕಗಳ ಪ್ರದರ್ಶನ ತಿಂಗಳ ಮಾಲಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ರಾಷ್ಟ್ರ ಮಟ್ಟದ ನಾಟಕಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಿ ರಂಗ ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ ಎಂದು “ಜನಪದರು” ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಪಾಪಣ್ಣ ತಿಳಿಸಿದರು. ಈ ಸಂದರ್ಭದಲ್ಲಿ ಸಿರಿಗೆ ಸೆರೆ ಕಾವ್ಯ ರಚನೆಕಾರ ಜಯರಾಮ್ ರಾಯ್ಪುರ, ಗ್ರಾಮ.ಪಂ.ಅಧ್ಯಕ್ಷರಾದ ಮಾರುತಿ ಕುಮಾರ್, ಜನಾರ್ಧನ್ ಗೌಡ, ಗ್ರಾಮ ಪಂ.ಸದಸ್ಯರಾದ ಮುನಿರಾಜು, ವೆಂಕಟೇಶ್, ಕಲಾವಿದ ರಂಜಿತ್, ಬೆಳತೂರು ರಾಮಕೃಷ್ಣ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here