ಜನಪರ ಕಾರ್ಯಕ್ಕೆ ಜನರಿಂದ ಬೆಂಬಲ.

0
171

ಚಾಮರಾಜನಗರ/ಕೊಳ್ಳೇಗಾಲ:ನರೇಂದ್ರ ಮೋದಿ ಅವರ ಜನಪರ ಕಾರ್ಯ ಗಳಿಗೆ ಜನತೆ ಸದಾ ಬೆಂಬಲ ನೀಡಲಿದ್ದಾರೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದರು.

ಅವರು ಕೊಳ್ಳೇಗಾಲ ಪಟ್ಟಣದ ಬಸ್ತಿಪುರ ಸೇರಿದಂತೆ ಹಲವೆಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,
ಕಾಂಗ್ರೆಸ್ ಸರ್ಕಾರ ಜನವಿರೋದಿ ನೀತಿ ಅನುಸರಿಸಿ ಕಾಯ೯ನಿವ೯ಹಿಸುತ್ತಿದೆ. ಕೇಂದ್ರದ ನರೇಂದ್ರ ಮೋದಿ ನೇತೖತ್ವದ ಬಿಜೆಪಿ ಸರ್ಕಾರ ಜನ ಸಾಮಾನ್ಯರಿಗಾಗಿ
ಹಲವು ಜನಪರ ಕೆಲಸಗಳನ್ನು ಮಾಡುತ್ತಿದೆ. ಅಂತಹ ಕಾಯ೯ಕ್ರಮಗಳನ್ನು ಜನತೆಗೆ ತಿಳಿಸುವ ಸಲುವಾಗಿ ಮನೆ ಮೆನೆಗೆ  ತೆರಳಲಾಗುತ್ತಿದೆ.

ಜನತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ ಸಕಾ೯ರ ತಿರಸ್ಕರಿಸುವ ನಿಟ್ಟಿನಲ್ಲಿ ರಾಜ್ಯದ ಜನತೆ ತೀಮಾ೯ನ ಕೈಗೊಳ್ಳಲಿದ್ದಾರೆ
ಎಂದು ಹೇಳಿದರು.

ಈಸಂದಭ೯ದಲ್ಲಿ  ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ನಿಗ೯ತಿಕರು, ಬಡವರ ಪರ ಅಪಾರ ಕಾಳಜಿ ಹೊಂದಿದ್ದಾರೆ. ಆಗಾಗಿ ಅವರ ತಂದ ಎಷ್ಟೊ ಜನಪರ ಯೋಜನೆಗಳು ಜನರಿಗೆ ತಿಳಿದಿಲ್ಲ, ಅದನ್ನು ತಿಳಿಸುವ ಕೆಲಸವನ್ನು ಮನೆ ಮನೆಗೆ ತೆರಳುವ ಮೂಲಕ ಮಾಡಲಾಗುತ್ತಿದೆ ಎಂದರು. ಜಿ.ಪಿ.ಶಿವಕುಮಾರ್ ಕೆಇಬಿ ಮಹದೇವಪ್ಪ, ಚೇತನ್, ಕೆಂಪಣ್ಣ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here