ಜನವಾದಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ..

0
173

ಮಂಡ್ಯ/ಮಳವಳ್ಳಿ:ಮಳವಳ್ಳಿ ತಾಲ್ಲೂಕು ಬೆಳಕವಾಡಿ ಸರ್ಕಾರಿ ಆಸ್ವತ್ರೆ ವೈದ್ಯರಿಲ್ಲದೆ ಗರ್ಭಿಣಿ ಸ್ತ್ರಿ ನರಳಾಡಿದ್ದ ಪ್ರಕರಕ್ಕೆ ಸಂಬಂದಿಸಿದಂದೆ ಇಂದು ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆ ಹಾಗೂ ಡಿವೈಎಪ್ ನಿಂದ ಪ್ರತಿಭಟನೆ ನಡೆಸಲಾಯಿತು. ಅಕ್ಟೋಬರ್ ೧೮ ರಂದು ತುಂಬು ಗರ್ಭಿಣಿ ದಿವ್ಯಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೆಳಕವಾಡಿ ಪ್ರಾಥಮಿಕ ಆಸ್ಪತ್ರೆಗೆ ಅತ್ತೆ ಮತ್ತು ತಾಯಿಯೊಂದಿಗೆ ಬಂದಿದ್ರು. ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಲಿ ವೈದ್ಯರಾಗಲಿ ಇಲ್ಲದ ಕಾರಣ ಆಸ್ಪತ್ರೆ ಮುಂಭಾಗವೇ ಕಣ್ಣೀರು ಹಾಕುತ್ತಾ ನರಳಾಡಿದ್ರು. ಇದೀಗ ಘಟನೆ ಖಂಡಿಸಿ ಬೆಳಕವಾಡಿ ಗ್ರಾಮದ ಕಾವೇರಿಗ್ರಾಮೀಣ ಬ್ಯಾಂಕ್ ಹತ್ತಿರದಿಂದ ಪ್ರಾಥಮಿಕ ಆರೊಗ್ಯಕೇಂದ್ರವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆಸ್ಪತ್ರೆ ಸಿಬ್ಬಂದ್ದಿ ಮತ್ತು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಜನವಾದಿ ಮಹಿಳೆ ಸಂಘಟನೆ ದೇವಿ ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here