ಜನಸಾಮಾನ್ಯರೊಂದಿಗೆ ದೀಪಾವಳಿ ಆಚರಣೆ

0
111

ಬಳ್ಳಾರಿ ‌/ಹೊಸಪೇಟೆ: ಶಾಸಕ ಆನಂದ್ ಸಿಂಗ್  ಕಳೆದ ಕೆಲ ದಿನಗಳಿಂದಕ್ಷೇತ್ರದಲ್ಲಿ ಗ್ರಾಮವಾಸ್ತವ್ಯದಲ್ಲಿರುವುದರಿಂದ ದೀಪಾವಳಿ ಹಬ್ಬವನ್ನು  ಕಮಲಾಪುರದ ರಜಪೂತ್ ಕೋಟೆಯಲ್ಲಿಜನರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು.

ಸಾಮಾನ್ಯವಾಗಿ ದೀಪಾವಳಿ ಹಬ್ಬವನ್ನು ಎಲ್ಲರೂ ತಮ್ಮತಮ್ಮ ಮನೆಯಲ್ಲಿ ಆಚರಿಸುತ್ತಾರೆ.  ಆದರೆ, ಶಾಸಕ ಆನಂದ್ಸಿಂಗ್ ಅವರು ಮಾತ್ರ  ಕ್ಷೇತ್ರದ ಜನರ ಸುಖ, ಶಾಂತಿ,ನೆಮ್ಮದಿಗಾಗಿ ಕಮಲಾಪುರದ ರಜಪೂತ್ ಕೋಟೆಯಲ್ಲಿ ಶ್ರೀಲಕ್ಷ್ಮಿ  ದೇವಿಯ ವಿಶೇಷ ಪೂಜೆ ನಡೆಸಿದರು.

ತಿರುಪತಿ ಯಿಂದ ಬಂದಿದ್ದ ಅರ್ಚಕರ ತಂಡ  ವಿಶೇಷವಾಗಿ ಲಕ್ಷ್ಮೀದೇವಿಯನ್ನು  ಅಲಂಕಾರ  ಮಾಡಿ, ವಿವಿಧ ಧಾರ್ಮಿಕವಿಧಾನಗಳ ಮೂಲಕ  ಲಕ್ಷ್ಮೀ ಪೂಜೆ ಸಲ್ಲಿಸಿದರು. ಸಾವಿರಾರುಜನರು ದೀಪಾವಳಿ ಪೂಜೆಯಲ್ಲಿ ಪಾಲ್ಗೊಂಡು ಲಕ್ಷ್ಮೀದೇವಿಯಕೃಪೆಗೆ ಪಾತ್ರರಾದರು.

ಕಳೆದ ಒಂಬತ್ತು ವರ್ಷಗಳಿಂದ ದೇವರಕೃಪಾಶೀರ್ವಾದದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಕೆಲಸಗಳಾಗಿವೆ. ಹೀಗೆ ದೇವರ ಕೃಪೆಯು ನಮ್ಮ ಕ್ಷೇತ್ರದಮೇಲೆ ನಿರಂತರವಾಗಿದ್ದು, ಅಭಿವೃದ್ಧಿ ಹೊಂದಲಿ ಎಂದುದೇವರಲ್ಲಿ ಶಾಸಕ ಆನಂದ್ ಸಿಂಗ್ ಪ್ರಾಥಿಸಿದರು.

ಸ್ಥಳೀಯ ಮಕ್ಕಳೊಂದಿಗೆ ಶಾಸಕ  ಆನಂದ್ ಸಿಂಗ್ ಪಟಾಕಿಹಚ್ಚಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here