ಜನಸೇವಾ ಕೇಂದ್ರ ಪ್ರಾರಂಭ.

0
196

ಚಾಮರಾಜನಗರ:ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ಅಭಿಮಾನಿಗಳಿಂದ  ಎನ್. ಮಹೇಶ್ ಜನಸೇವಾ ಕೇಂದ್ರ ಪ್ರಾರಂಭ,

ಬಡಜನರಿಗೆ ನೆರವು ನೀಡುವುದು ಕೇಂದ್ರದ ಉದ್ದೇಶ, ಕೊಳ್ಳೇಗಾಲ ವ್ಯಾಪ್ತಿಯಲ್ಲಿ 7, ಯಳಂದೂರಿನಲ್ಲಿ 12, ಸಂತೆಮರಳ್ಳಿಯಲ್ಲಿ 11ಕೇಂದ್ರ,
ಆಧಾರ್ ಕಾಡ್೯, ಪಡಿತರ ಚೀಟಿ ವೖದ್ಯಾಪ್ಯ ವೇತನದಿಂದ ವಂಚಿತರಾದವರಿಗೆ ನೆರವು ನೀಡಲು ಕೇಂದ್ರ ಸ್ಥಾಪನೆ
ಕನ್ನಡಪ್ರಭ ವಾತೆ೯, ಕೊಳ್ಳೇಗಾಲ.  ಆ.14.    ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಆಧಾರ್ ಕಾಡ೯, ಪಡಿತರೆ ಚೀಟಿ, ವೖದ್ದಾಪ್. ವೇತನ
ಸೇರಿದಂತೆ ಇತರೆ  ಸೌಲಭ್ಯಗಳಿಂದ ವಂಚಿತಗೊಂಡ ನಾಗರೀಕರಿಗೆ ಸಕಾ೯ರಿ  ಸೌಲಭ್ಯ ಕಲ್ಪಿಸಿ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ
ಆ.15ರಿಂದ ಕೊಳ್ಳೇಗಾಲ, ಯಳಂದೂರು, ಸಂತೇಮರಳ್ಳಿ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಗೊಂದು  ಎನ್.ಮಹೇಶ್ ಜನಸೇವಾ ಕೇಂದ್ರ  ಪ್ರಾರಂಭಿಸಲಾಗುವುದು ಎಂದು  ಬಹುಜನ ಸಮಾಜ ಪಾಟಿ೯ಯ ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಅವರು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಅವರು ಹಾಗೂ ಅವರ ನೇತೖತ್ವದಲ್ಲಿ ನಾವು ಪಟ್ಟಣ ಪ್ರದೇಶದಲ್ಲಿ ವಾಕ್ ಟು ವಾಡ್೯ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಕ್ ಟು ವಿಲೇಜ್ ಎಂದು ಕಾಯ೯ಕ್ರಮ ನಡೆಸಿ ಅಲ್ಲಿನ ಜನಸಾಮಾನ್ಯರ ಸಮಸ್ಯೆ ಕೇಳಿದಾಗ ಬಹುತೇಕ ಮಂದಿಗೆ ರೇಷನ್ ಕಾಡ್೯ ಇಲ್ಲ, ಆಧಾರ್ ಕಾಡ್೯ ಇಲ್ಲ, ಹಾಗೂ ಆಧಾರ್ ನಲ್ಲಿ ಲೋಪ ದೋಷ,  ವೖದ್ಯಾಪ್ಯ ವೇತನ ಸಿಗುತ್ತಿಲ್ಲ ಹೀಗೆ ಹತ್ತಾರು ಸಮಸ್ಯೆಗಳು ಕಂಡು ಬಂದವು, ಸಕಾ೯ರದ ಅಧಿಕಾರಿಗಳು ನಾಗರೀಕರಿಗೆ ಇಂತಹ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಫರಾಗಿದ್ದಾರೆ. ಆಗಾಗಿ ಕಿಂಚಿತಾದ್ದರೂಹಲವು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವು ಮುಂದಾಗಿದ್ದೆವೆ.
ಪ್ರತಿ ಗ್ರಾಪಂ ವ್ಯಾಪ್ತಿಗೊಂಡು ಜನಸೇವಾ ಕೇಂದ್ರ ಪ್ರಾರಂಭಿಸಿ ಅಲ್ಲಿಗೆ ಅಜಿ೯ ಸಲ್ಲಿಸಿದ  ದೂರುದಾರರನ್ನೆ ನಮ್ಮ ಪಕ್ಷದ ಕಾಯ೯ಕತ೯ರು ಸ್ವತಃ ಕರೆದುಕೊಂಡು ಹೋಗಿ ಯಾವುದೆ ಲಂಚವಿಲ್ಲದ ಕೆಲಸ ಮಾಡಿಸುತ್ತಾರೆ.  ಈಗಾಗಲೇ ರೇಷನ್ ಕಾಡ್೯, ವೖದ್ದಾಯಪ್ಯ ವೇತನ ಸೇರಿದಂತೆ ಇತರೆ ಸೌಲಭ್ಯಕ್ಕೆ ನಾಗರೀಕರು ಸಾವಿರಾರು ರೂಗಳನ್ನು ಮದ್ಯವತಿ೯ಗಳಿಗೆ ನೀಡಿ ಕಳೆದುಕೊಳ್ಳುತ್ತಿರುವುದನ್ನು ನಾವು ಮನಗಂಡು ಸ್ಪಂದನಾ ಮನೋಭಾವದಿಂದ ಜನಸೇವಾ ಕೇಂದ್ರ ಪ್ರಾರಂಭಿಸುತ್ತಿದ್ದೆವೆ.
ಸಕಾ೯ರ ವಿಧಿಸಿರುವ ಶುಲ್ಕದಲ್ಲಿ ನಾವು ನಾಗರೀಕರಿಗೆ ನೆರವಾಗುತ್ತೆವೆ ಎಂದು ವಿವರಿಸಿದರು.
15ರಂದು ಕೊಳ್ಳೇಗಾಲದಲ್ಲಿ- ಆ.15ರಂದು ಕೊಳ್ಳೇಗಾಲದ ಸಿಂಡಿಕೇಟ್ ಬ್ಯಾಂಕ್  ಹತ್ತಿರ, ಕುಣಗಳ್ಳಿ, ಕುಂತೂರು, ಮುಳ್ಳೂರು ಸೇರಿದಂತೆ 7ಕೇಂದ್ರ ಪ್ರಾರಂಭಿಸಲಾಗುವುದು,
ಆ.16ರಂದು ಯಳಂದೂರು ಪಟ್ಟಣ ಹಾಗೂ ಪಂಚಾಯ್ತಿ ವ್ಯಾಪ್ತಿಗಳಲ್ಲಿ 12 ಕೇಂದ್ರ ಹಾಗೂ ಸಂತೇ ಮರಳ್ಳಿ ವ್ಯಾಪ್ತಿಗಳಲ್ಲಿ 11ಕೇಂದ್ರ ಪ್ರಾರಂಭಿಸಲಾಗುವುದು. ಒಟ್ಟಾರೆ
32ಜನಸೇವಾ ಕೇಂದ್ರಗಳನ್ನು ಪ್ರಾರಂಭಿಸಿ ಜನರಿಗೆ ಸೇವೆ ಕಲ್ಪಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಪ್ರತಿ ಕಚೇರಿಯಲ್ಲೂ ಪಕ್ಷದ ಮುಖಂಡರು ಹಾಜರಿದ್ದು
ಜನಸೇವೆಗೆ ನಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದರು.
ಈಸಂದಬ೯ದಲ್ಲಿ ನಗರಸಭೆ ಸದಸ್ಯ ರಂಗಸ್ವಾಮಿ, ರಾಮಣ್ಣ, ಮುಖಂಡರುಗಳಾದ  ಬೂದಿತಿಟ್ಟು ರಾಜೇಂದ್ರ, ಕಾಂತರಾಜಾಚಾರಿ,   ಕಾಂತಪ್ಪ,
ಶಂಕನಪುರ ಜಗದೀಶ್, ಬಸಂತ್, ರಂಗಸ್ವಾಮಿ, ಸುಮುಖ, ಅಹಮ್ಮದ್ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here