ಜನ ಆಶೀರ್ವಾದ ಮಹಾಸಭೆ

0
175

ಕೋಲಾರ/ಬೇತಮಂಗಲ:ಕಾಂಗ್ರೆಸ್ ನಡೆ ಮನೆಯ ಕಡೆಗೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಐದು ವರ್ಷಗಳ ಸಾಧನೆಯನ್ನು ಪ್ರತಿಯೊಂದು ಹಳ್ಳಿಯಲ್ಲೂ ಬೂತ್ ಕಮಿಟಿ ಮಾಡಿ ಆ ಕಮಿಟಿಯ ಸದಸ್ಯರ ಮೂಲಕ ಜನರಿಗೆ ತಿಳಿಸಿಕೊಡಲಾಗುತ್ತದೆ ಮೂರನೇ ದಿನ ಯಶಸ್ವಿಯಾಗಿ ನಡೆಯಿತು.ಬೇತಮಂಗಲದಲ್ಲಿ ನ್ಯೂಟನ್ ಗ್ರಾಮದಲ್ಲಿ ಬೂತ್ ಕಮಿಟಿಯ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನು ಬೇತಮಂಗಲ ಬೂತ್ ಸಮಿತಿ ಅಧ್ಯಕ್ಷರಾದ ರಾಧಾ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ನಡೆಯಿತು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಕಾಂಕ್ಷಿ ರೂಪಾ ಶಶಿಧರ್ ಮಾತನಾಡಿ ಮುಂದಿನ ವಿಧಾನಸಭೆಯಲ್ಲಿ ತಮ್ಮನ್ನು ಬೆಂಬಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಕುಟುಂಬ ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು ಈ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ್ ಕೆಜಿಎಫ್ ಕೆಡಿಎ ಅಧ್ಯಕ್ಷ ವೆಂಕಟರಾಮ್ ರೆಡ್ಡಿ ಹುಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯಶಂಕರ್ ಬೇತಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರಾದ ಗೋಪಿ ಮುನಿಸ್ವಾಮಿ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here