ಜನ-ಜಾಗೃತಿಗಾಗಿ ಸೈಕಲ್ ಜಾಥಾ..

0
384

ಬಳ್ಳಾರಿ /ಹೊಸಪೇಟೆ:ಆರೋಗ್ಯ,ಯೋಗ, ಪರಿಸರ ಸಂಕ್ಷಣೆಯ ಜನ-ಜಾಗೃತಿಗಾಗಿ ರಾಜ್ಯಾದ್ಯಾಂತ ಸೈಕಲ್ ಜಾಥ ಕೈಗೊಂಡಿರುವ ಬೆಂಗಳೂರು ಮೂಲದ ಯುವಕರು, ಇದೀಗ ವಿಶ್ವಪ್ರಸಿದ್ಧ ಹಂಪಿಗೆ ಬೇಟಿ ನೀಡಿ ಸೋಮವಾರ ಜಾಗೃತಿ ಉಂಟು ಮಾಡಿದರು.

ಬೆಂಗಳೂರಿನಿಂದ ಸೈಕಲ್ ಜಾಥ ಕೈಗೊಂಡಿರುವ ಯುವಕರು, ಆರೋಗ್ಯ,ಯೋಗ, ಪರಿಸರ ಸಂಕ್ಷಣೆ ಜಾಗೃತಿ ನಾಮಫಲಕವನ್ನು ತಗಲು ಹಾಕಿಕೊಂಡು, 30 ದಿನಗಳ ಕಾಲ ರಾಜ್ಯದ 30 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿಗಳಾಗಿರುವ ಯುವಕರು, ನಿತಿನ್ ಗೌಡ, ರೋಹಿತ್ ಆರಾಧ್ಯ ಹಾಗೂ ಕಪಿಲ್ ಶರ್ಮಾ ತಮ್ಮ ಸೈಕಲ್ ಮೂಲಕ ಹಂಪಿಗೆ ಬಂದಿದ್ದು, ಇದೇ ವೇಳೆ ತಮ್ಮ ಜೊತೆಯಲ್ಲಿ ತಂದಿದ್ದ ರಾಷ್ಟ್ರಧ್ವಜವನ್ನು ಸ್ಥಳದಲ್ಲಿ ಹಿಡಿದು ದೇಶ ಪ್ರೇಮ ಮೆರೆದರು.

ಸೆ.24, 25ರಂದು ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯ, ಐತಿಹಾಸಿಕ ಹಂಪಿ ಸ್ಮಾರಕಗಳು, ದೇವಾಲಯಗಳು, ಸುತ್ತಲಿನ ಪ್ರವಾಸಿ ತಾಣಗಳು, ಹೊಸಪೇಟೆ ತಾಲೂಕಿನ ಐತಿಹಾಸಿಕ ತಿಮ್ಮಲಾಪುರದ ತ್ರಿಕೂಟೇಶ್ವರ ಹಾಗೂ ಶ್ರೀ ಕೃಷ್ಣ ದೇವಸ್ಥಾನಗಳಿಗೆ ಭೇಟಿ ಅಲ್ಲಿನ ಪ್ರವಾಸಿಗಳಿಗೆ ಸೈಕಲ್ ಮೂಲಕ ಯೋಗ ಆರೋಗ್ಯ ಕ್ಷೇಮ, ಇದರಿಂದ ದೈಹಿಕ ಸಾಮಾರ್ಥ್ಯ ಧಾಮ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ, ಇದರಿಂದ ಶುದ್ದ ಗಾಳಿ, ಶದ್ದ ಆಹಾರ, ಹಾಗೂ ಶುದ್ದ ವಾತಾವರಣ. ಇನ್ನು ಮದ್ಯ ಸೇವನೆ ಶರೀರಿಕ ನಾಶ, ಇದರಿಂದ ವ್ಯವಕ್ತಿತ್ವ ನಾಶ ಎನ್ನುವ ಪ್ರಚಾರದೊಂದಿಗೆ ಹಂಪಿಗೆ ದೇಶ-ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರಿಗೆ ಜಾಗೃತಿ ಮೂಡಿಸಿದರು. ಹಂಪಿ ಪ್ರವಾಸದ ಬಳಿಕ ರಾಯಚೂರು, ಬೀದರ್ ಜಿಲ್ಲೆಗಳ ಪ್ರವಾಸ ಮಾಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ ತಮ್ಮ ಸೈಕಲ್ ಮೂಲಕ ಪ್ರವಾಸ ಆರಂಭಿಸುವ ಇವರು ಸಂಜೆವರಗೆ 100 ಕಿಮೀ ದಾರಿಯನ್ನು ಕ್ರಮಿಸಿ, ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಾರೆ.

LEAVE A REPLY

Please enter your comment!
Please enter your name here