ಜನ ಜಾಗೃತಿ ಸಮಾವೇಶ:ಬೃಹತ್ ಜಾಥಾ

0
139

ಬಳ್ಳಾರಿ /ಹೊಸಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಜನ ಜಾಗೃತ ಸಮಾವೇಶ ಹಾಗೂ ಪಾನಾ ಮುಕ್ತರ ಅಭಿನಂಧನಾ ಸಮಾರಂಭದ ನಿಮಿತ್ತವಾಗಿ ನಗರದ  ಪ್ರಮುಖ ಬೀದಿಗಳಲ್ಲಿ ಬೃಹತ್ ಜನ ಜಾಗೃತಿ ಜಾಥಾ  ನಡೆಯಿತು.

ರಾಜ್ಯ ಕಾಂಗ್ರೆಸ್ ಪಕ್ಷದ ಪ್ರೋಫೆಸೆನಲ್ ಸೆಲ್ ಹೈದ್ರಾಬಾದ್ ಕರ್ನಾಟಕ ಉಸ್ತುವಾರಿ ಹೆಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ, ಜಾಥಕ್ಕೆ ಚಾಲನೆ ನೀಡಿದರು.

ಜನ ಜಾಗೃತ ಸಮಾವೇಶ ಹಾಗೂ ಪಾನ ಮುಕ್ತರ ಅಭಿನಂಧನಾ ಸಮಾರಂಭದ ಅಂಗವಾಗಿ ನೂರಾರು ಮಹಿಳೆಯರು ಪೂರ್ಣ ಕುಂಭವನ್ನು ಹೊತ್ತು ರ್ಯಾಲಿಯಲ್ಲಿ ಸಾಗಿ ಬಂದರು.

ಮಧ್ಯಪಾನ ತ್ಯಜಿಸುವ ಕುರಿತು ಜಾಗೃತಿ ಮೂಡಿಸುವ ವಿವಿಧ ಬಿತ್ತಿ ಫಲಕಗಳನ್ನು ಪ್ರದರ್ಶನ  ಮಾಡುವ ಮೂಲಕ ಜಾಗೃತಿ ಉಂಟು ಮಾಡಿದರು.

ನಗರದ ಸಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾಥಾ, ಗಾಂಧಿ ಚೌಕ ಮತ್ತು ಅಂಬೇಡ್ಕರ್ ಸರ್ಕಲ್ ಮೂಲಕ ತಾಲ್ಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಗೊಂಡಿತು.

ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡ ಜಾಥಾಕ್ಕೆ ಚಾಲನೆ ನೀಡಲಾಯಿತು.

ಕಾಂಗ್ರೆಸ್  ಮುಖಂಡ ಗುಜ್ಜಲ್ ನಾಗರಾಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್, ಯೋಜನಾಧಿಕಾ ನಾರಾಯಣ ಗೌಡ,  ಜಿಲ್ಲಾ ಜನ ಜಾಗೃತಿ ವೇದಿಕೆ  ಅಧ್ಯಕ್ಷ ನಟರಾಜ್ ಬಾದಾಮಿ, ಸ್ತ್ರೀ ಶಕ್ತಿ ಸಂಘದ ಮುಖಂಡರಾದ ವಿ. ಲಕ್ಷ್ಮಿ ಹಾಗೂ ಮುಖಂಡರಾದ ಪರಶುರಾಮ್, ವೆಂಕಟೇಶ್ ಹಾಗೂ ಶೇಖರ್ ಇತರರಿದ್ದರು.

LEAVE A REPLY

Please enter your comment!
Please enter your name here