ವಿದ್ಯುತ್ ಕಟ್,ಜನ ಜೀವನ ಅಸ್ಥವ್ಯಸ್ಥ

0
187

ರಾಯಚೂರು : ನಿನ್ನೆ ರಾತ್ರಿ ಗಾಳಿ ಸಹಿತ ಮಳೆಗೆ ಮನೆ ಮತ್ತು ಗುಡಿಸಲುಗಳ ಟಿನ್‌‌ಶೆಡ್‌ಗಳು ಹಾರಿಹೋಗಿದ ಘಟನೆ ನಡೆದಿದೆ.ತಾಲ್ಲೂಕಿನ ಮನ್ಸಲಾಪೂರ ಗ್ರಾಪಂ ವ್ಯಾಪ್ತಿಯ ಮರ್ಚೇಡ್ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಸುಮಾರು 25 ರಿಂದ 30 ಕ್ಕೂ ಹೆಚ್ಚು ಮನೆಯ ಟೀನ್ ಶೆಡ್ ಗಳು ಗಾಳಿಗೆ ಸುಮಾರು ಒಂದು ಕಿ.ಮೀಟರ್ ವರೆಗೆ ಹಾರಿ ಹೋಗಿವೆ. ನಿನ್ನೆ ಸಂಜೆಯಿಂದ ಬಿರುಗಾಳಿ ಬೀಸಿದ್ದು ಟೀನ್ ಸೆಡ್ ಗಳು ಹಾರಿಹೋಗಿದ್ದರಿಂದ ಯಾವುದೇ ಅನಾವುತಗಳು ಸಂಬವಿಸಿಲ್ಲ, ಭಾರಿ ಮಳೆ ಸುರಿದಿದ್ದರಿಂದ ಗ್ರಾಮದಲ್ಲಿ ಮರಗಳು ಧರೆಗುರುಳಿದಿವೆ,ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಕಾರಣ ವಿದ್ಯುತ್ ನಲ್ಲಿ ವ್ಯತ್ಯಯವಾಗಿದೆ. 8 ಮನೆಗಳು ಜಖಂಗೊಂಡಿವೆ. ಗ್ರಾಮದಲ್ಲಿ ಸುರಿದ ಮೊದಲ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮಕ್ಕೆ ಇದೀಗ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾ.ಪಂ ಸದಸ್ಯರು ಬೇಟಿ ನೀಡಿದ್ದು ಮನೆಗಳ ಸ್ಥಿತಿಗತಿಗಳ ಬಗ್ಗೆ ವೀಕ್ಷಣೆ ಮಾಡಿ ವರಧಿ ಪಡೆಯುತ್ತಿದ್ದಾರೆ.ಮಳೆಯ ಅವಾಂತರದಿಂದ ನಷ್ಟವಾಗಿದ್ದು ಪರಿಹಾರವನ್ನು ಒದಗಿಸಿಕೊಡಲು ಅಂಗಲಾಚಿದ್ದಾರೆ ಸರಕಾರ ಸೂಕ್ತ ಪರಿಹಾರವನ್ನು ಸಂತ್ರಸ್ಥರಿಗೆ ಕಲ್ಪಿಸಬೇಕಾಗಿದೆ

LEAVE A REPLY

Please enter your comment!
Please enter your name here